Khanapur

ಖಾನಾಪುರ: ಮಡವಾಳ್-ಹಲಶಿ ರಸ್ತೆ ಕುಸಿತ; ಹತ್ತು ಹಳ್ಳಿಗಳ ಸಂಪರ್ಕ ಕಡಿತದ ಭೀತಿ!

Share

ಖಾನಾಪುರ ತಾಲೂಕಿನ ಮಡವಾಳ್-ಹಲಶಿ ರಸ್ತೆಯ ಹಳ್ಳದ ಪಕ್ಕದ ಭಾಗವು ಭಾರಿ ಮಳೆಗೆ ಕುಸಿದಿದ್ದು, ಸಂಚಾರಕ್ಕೆ ತೀವ್ರ ಅಪಾಯ ಎದುರಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ಈ ಭಾಗದ ಪ್ರಮುಖ 10 ಹಳ್ಳಿಗಳ ಸಂಪರ್ಕ ಸಂಪೂರ್ಣ ಬಂದ್ ಆಗುವ ಆತಂಕ ಎದುರಾಗಿದ್ದು, ಲೋಕೋಪಯೋಗಿ ಇಲಾಖೆ ತಕ್ಷಣವೇ ಶಾಶ್ವತ ಕಾಮಗಾರಿ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಖಾನಾಪುರ ತಾಲೂಕಿನ ಮಡವಾಳ್-ಹಲಶಿ ರಸ್ತೆಯ ಹಳ್ಳದ ಸಮೀಪದ ರಸ್ತೆ ಭಾಗವು ಇತ್ತೀಚೆಗೆ ಸುರಿದ ಭಾರಿ ಮಳೆಗೆ ತೀವ್ರವಾಗಿ ಕುಸಿದಿದ್ದು, ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ವರ್ಷವೂ ರಸ್ತೆಯ ಒಂದು ಬದಿ ಕುಸಿದಿದ್ದು, ಈ ಬಾರಿ ಮತ್ತೊಂದು ಬದಿ ಕುಸಿಯುತ್ತಿರುವುದರಿಂದ ಮಡವಾಳ್, ಹಲಶಿ, ದೇವರಾಯಿ, ಘೋಟಗಾಳಿ, ರೇಡೇಕುಂಡಿ, ತಾರವಾಡ, ರಂಜನಕೋಡಿ, ಶಿವಠಾಣ್ ಸೇರಿದಂತೆ ಸುಮಾರು ಹತ್ತು ಹಳ್ಳಿಗಳ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಭೀತಿ ಎದುರಾಗಿದೆ. ಪ್ರಸ್ತುತ ಹಳ್ಳದಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು, ರಸ್ತೆ ಕಿರಿದಾಗಿರುವುದರಿಂದ ಯಾವುದೇ ಕ್ಷಣದಲ್ಲಾದರೂ ಸಾರಿಗೆ ಸಂಪೂರ್ಣ ಸ್ಥಗಿತಗೊಳ್ಳಬಹುದು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಬಾಬಾಸಾಹೇಬ್ ದೇಸಾಯಿ, ಮಹಾದೇವ ಫಟಾಣ್ ಸೇರಿದಂತೆ ಸ್ಥಳೀಯ ನಾಗರಿಕರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಈ ರಸ್ತೆಯನ್ನು ವಿಸ್ತರಿಸಿ ಶಾಶ್ವತವಾಗಿ ಪಕ್ಕಾ ರಸ್ತೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

Tags:

error: Content is protected !!