Khanapur

ಚನ್ನೇವಾಡಿ ಗ್ರಾಮಕ್ಕೆ ಪ್ರತ್ಯೇಕ ಮತಗಟ್ಟೆ, ವಾರ್ಡ್ ರಚನೆಗೆ ತಹಶೀಲ್ದಾರರಿಗೆ ಮನವಿ

Share

ಖಾನಾಪುರ ತಾಲೂಕಿನ ಚನ್ನೇವಾಡಿ ಗ್ರಾಮಸ್ಥರು ತಮ್ಮ ಊರಿಗೆ ಪ್ರತ್ಯೇಕ ಮತಗಟ್ಟೆ ಹಾಗೂ ಕಸಬಾ ನಂದಗಡ ಗ್ರಾಮ ಪಂಚಾಯಿತಿಯಲ್ಲಿ ಪ್ರತ್ಯೇಕ ವಾರ್ಡ್‌ ರಚಿಸುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಖಾನಾಪುರ ತಾಲೂಕಿನ ಚನ್ನೇವಾಡಿ ಗ್ರಾಮಕ್ಕೆ ಪ್ರತ್ಯೇಕ ಮತಗಟ್ಟೆ ಹಾಗೂ ಕಸಬಾ ನಂದಗಡ ಗ್ರಾಮ ಪಂಚಾಯಿತಿಯಲ್ಲಿ ಪ್ರತ್ಯೇಕ ವಾರ್ಡ್ ರಚಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮತದಾರ ನೋಂದಣಾಧಿಕಾರಿ ಬಲರಾಮ ಚೌವ್ಹಾಣ್ ಹಾಗೂ ತಹಶೀಲ್ದಾರ್ ದುಂಡಪ್ಪ ಕೋಮಾರ್ ಅವರಿಗೆ ಮನವಿ ಸಲ್ಲಿಸಿದರು.

ಹಿಂದೆ ಚನ್ನೇವಾಡಿಯಲ್ಲಿದ್ದ ಮತಗಟ್ಟೆಯನ್ನು ಭುತ್ತೇವಾಡಿಗೆ ಸ್ಥಳಾಂತರಿಸಿದ್ದರಿಂದ ವೃದ್ಧರು ಹಾಗೂ ಅಂಗವಿಕಲರು ಮತದಾನ ಮಾಡಲು ದೂರ ಪ್ರಯಾಣಿಸಬೇಕಾಗಿದ್ದು, ಹಲವರು ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಜೊತೆಗೆ, ಭುತ್ತೇವಾಡಿಗಿಂತ ಕಡಿಮೆ ಮತದಾರರಿರುವ ಚನ್ನೇವಾಡಿ ಗ್ರಾಮವು ಅದೇ ವಾರ್ಡ್‌ಗೆ ಸೇರಿರುವುದರಿಂದ ಗ್ರಾಮಕ್ಕೆ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ಸಿಗದೆ ಅಭಿವೃದ್ಧಿ ಕುಂಠಿತಗೊಳ್ಳುತ್ತಿದ್ದು, ತಕ್ಷಣವೇ ಪ್ರತ್ಯೇಕ ವಾರ್ಡ್ ಮತ್ತು ಮತಗಟ್ಟೆ ಮಂಜೂರು ಮಾಡಬೇಕೆಂದು ಶಾಮರಾವ್ ಪಾಟೀಲ, ಧನಂಜಯ ಪಾಟೀಲ ಸೇರಿದಂತೆ ನೂರಾರು ಗ್ರಾಮಸ್ಥರು ಸಹಿ ಮಾಡಿದ ಮನವಿಯ ಮೂಲಕ ತುರ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.

Tags:

error: Content is protected !!