raybag

ರಾಯಬಾಗದ 39 ಕೆರೆಗಳಿಗೆ ನೀರು ಬಿಡುಗಡೆ:ರೈತರು ಆತಂಕ ಪಡುವ ಅಗತ್ಯವಿಲ್ಲ

Share

ರಾಯಬಾಗದ 39 ಕೆರೆಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲ 39 ಕೆರೆಗಳು ಸಂಪೂರ್ಣವಾಗಿ ತುಂಬುವವರೆಗೂ ನೀರು ನಿಲ್ಲಿಸುವುದಿಲ್ಲ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.

ರಾಯಬಾಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 19 ಗ್ರಾಮಗಳ ಒಟ್ಟು 39 ಕೆರೆಗಳಿಗೆ 2 ಮೋಟಾರ್‌ಗಳ ಮೂಲಕ ನೀರು ಬಿಡುಗಡೆಗೊಳಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಚಾಲನೆಗೊಳಿಸಲಾಗಿದೆ ಎಂದು ಮಾನ್ಯ ಶಾಸಕರಾದ ದುರ್ಯೋಧನ ಐಹೊಳೆ ತಿಳಿಸಿದ್ದಾರೆ. ಅಧಿಕಾರಿಗಳು ಹಾಗೂ ತಹಶೀಲ್ದಾರರೊಂದಿಗೆ ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ತಾಂತ್ರಿಕ ಕಾರಣಗಳಿಂದ ಸ್ವಲ್ಪ ವಿಳಂಬವಾಗಿದ್ದರೂ ಈಗ ನಿರಂತರವಾಗಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದರು. ಬೆಳಗಾವಿ ಜಿಲ್ಲೆಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಬ್ಯುಸಿಯಾಗಿದ್ದರೂ, ತಹಶೀಲ್ದಾರ್ ಅವರಿಗೆ ಸೂಚನೆ ನೀಡಿ ಟ್ರಯಲ್ ರನ್ ಯಶಸ್ವಿಗೊಳಿಸಲಾಗಿದೆ. ಕ್ಷೇತ್ರದ ಯಾವುದೇ ರೈತರು ಆತಂಕ ಪಡುವ ಅಗತ್ಯವಿಲ್ಲ, ಎಲ್ಲ 39 ಕೆರೆಗಳು ಸಂಪೂರ್ಣವಾಗಿ ತುಂಬುವವರೆಗೂ ನೀರು ನಿಲ್ಲಿಸುವುದಿಲ್ಲ ಎಂದು ಶಾಸಕರು ರೈತ ಬಾಂಧವರಿಗೆ ಈ ಸಂದರ್ಭದಲ್ಲಿ ದೃಢವಾದ ಭರವಸೆ ನೀಡಿದರು.

Tags:

error: Content is protected !!