Belagavi

ಅಕ್ರಮ ವಲಸಿಗರಿಗೆ ಸ್ವರ್ಗ ನಿರ್ಮಿಸಲು ಹೊರಟಿದೆ ರಾಜ್ಯ ಸರ್ಕಾರ;

Share

ಕೇಂದ್ರ ಚುನಾವಣಾ ಆಯೋಗ ನಡೆಸಿರುವ ಎಸ್ಐಆರ್ ಪ್ರಕ್ರಿಯೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಆದರೆ ರಾಜ್ಯ ಸರಕಾರ ಕಾನೂನಿನ ಬೆಂಬಲ‌ ಇಲ್ಲದೆ ಶಾಶ್ವತ ನಾಗರೀಕ ಶಾಶ್ವತ‌ ನಿವಾಸ ಕಡ್ಡಾಯ ಎಂದು ನೋಟಿಫಿಕೇಶ‌ನ್ ಹೊರಡಿಸಿದ್ದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಲಿದೆ. ಅಲ್ಲದೇ ರಾಜ್ಯ ಸರ್ಕಾರ ಅಕ್ರಮ ವಲಸಿಗರಿಗೆ ಸ್ವರ್ಗ ನಿರ್ಮಿಸಲು ಹೊರಟಿದೆ ಎಂದು ಎಂದು ಬಿಜೆಪಿ ಮುಖಂಡ ಎಂ.ಬಿ.ಝೀರಲಿ ಆರೋಪಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ವಕ್ತಾರ ಎಂ.ಬಿ. ಝೀರಲಿ ಅವರು ಮಾತನಾಡಿದರು. ಯೋಗ್ಯ ನಾಗೀಕರಿಗೆ ಮತದಾನದ ಹಕ್ಕು ನೀಡುವ ಉದ್ಧೇಶದಿಂದ ಭಾರತೀಯ ಚುನಾವಣಾ ಆಯೋಗದಿಂದ ಎಸ್.ಐ.ಆರ್ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ಜೂನ್ 29 ರಂದು ಒಂದು ಅಧಿಸೂಚನೆಯನ್ನು ಹೊರಡಿಸಿ, ಶಾಶ್ವತ ನಿವಾಸಿ ಪತ್ರ ನೀಡಲು ಎಚ್ಚೆತ್ತುಕೊಂಡಿದೆ. ಪ್ರತಿ ಗ್ರಾಮ, ನಗರ ಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯ ಸೌಲಭ್ಯ ಕೌಂಟರ್’ಗಳನ್ನು ಸ್ಥಾಪಿಸಿ ಪರ್ಯಾಯ ವ್ಯವಸ್ಥೆಯನ್ನು ನಿರ್ಮಾಣ ಮಾಡಲೂ ಹೊರಟಿದೆ. ಕಾನೂನು ಮತ್ತು ಸಂವಿಧಾನದ ವಿರೋಧವಾಗಿ ಭಾರತೀಯ ನಾಗರೀಕತೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಕರ್ನಾಟಕ ಸರ್ಕಾರ ಅಕ್ರಮ ವಲಸಿಗರಿಗೆ ಸ್ವರ್ಗವನ್ನು ನಿರ್ಮಿಸ ಹೊರಟಿದೆ. ಇದನ್ನ ಭಾರತೀಯ ಜನತಾ ಪಕ್ಷ ಇದನ್ನು ವಿರೋಧಿಸಿದೆ. ಈಗಾಗಲೇ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಗೃಹ ಸಚಿವರಿಗೆ ಪತ್ರವನ್ನು ಬರೆದು ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕಾನೂನಿನ ಬೆಂಬಲವಿಲ್ಲದೇ ಅಧಿಸೂಚನೆ ಹೊರಡಿಸಿ, ಕರ್ನಾಟಕ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ. ಇದರಿಂದ ನಿಜವಾದ ಭಾರತೀಯ ನಾಗರೀಕರು ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ರಾಜ್ಯ ಸರಕಾರ ಹೊರಡಿಸಿರುವ ಶಾಶ್ವತ ಖಾಯಂ ನಿವಾಸ ಕಡ್ಡಾಯಗೊಳಿಸಿರುವ ನೋಟಿಫಿಕೇಶ‌ನ್ ಅನ್ನು ರಾಜ್ಯ ಸರಕಾರ ತತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬೆಳಗಾವಿ, ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ರಹವಾಸಿಗಳು ವಲಸಿ ಬಂದಿದ್ದಾರೆ. ಅಂಥವರಿಗೆ ರಕ್ಷಣೆ ಮಾಡುವುದನ್ನು ಬಿಟ್ಟು ನಮ್ಮ ರಾಜ್ಯದವರಿಗೆ ಸಿಗಬೇಕಾದ ಸೌಲಭ್ಯ ಬೇರೆಯವರಿಗೆ ಹೋಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಉಪಮಹಾಪೌರ ಹಣುಮಂತ ಕೊಂಗಾಲಿ, ನಗರಸೇವಕ ರಾಜಶೇಖರ್ ಢೋಣಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನೀಲ ಬೆನಕೆ, ನಗರಾಧ್ಯಕ್ಷೆ ಗೀತಾ ಸುತಾರ್, ಮಾಜಿ ಶಾಸಕ ಸಂಜಯ್ ಪಾಟೀಲ್, ರಮೇಶ್ ದೇಶಪಾಂಡೆ, ಉಜ್ವಲಾ ಬಡವಣ್ಣಾಚೆ, ರಾಜೇಂದ್ರ ಹರಕುಣಿ, ಈರಯ್ಯಾ ಖೋತ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!