Belagavi

ಬೆಳಗಾವಿ: ಅಲರವಾಡದಲ್ಲಿ ರಾತ್ರೋರಾತ್ರಿ ಜಲಜೀವನ್ ಮಿಷನ್ ನಳಗಳ ಕಳ್ಳತನ; 50ಕ್ಕೂ ಹೆಚ್ಚು ಮನೆಗಳಿಗೆ ಶಾಕ್!

Share

ಬೆಳಗಾವಿ ತಾಲೂಕಿನ ಅಲರವಾಡ ಗ್ರಾಮದಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಸರ್ಕಾರದ ಮಹತ್ವಾಕಾಂಕ್ಷಿ ‘ಜಲಜೀವನ್ ಮಿಷನ್’ ಯೋಜನೆಗೆ ಕನ್ನ ಹಾಕಿದ್ದಾರೆ. ಗ್ರಾಮದ ಅಡವಿ ಗಲ್ಲಿಯಲ್ಲಿ ಜಲಜೀವನ್ ಯೋಜನೆಯಡಿ ಮನೆ ಮನೆಗೆ ಅಳವಡಿಸಲಾಗಿದ್ದ ನಳಗಳನ್ನು (ಟ್ಯಾಪ್‌ಗಳು) ರಾತ್ರೋರಾತ್ರಿ ಕದ್ದೊಯ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಅಲರವಾಡ ಗ್ರಾಮದ ಅಡವಿ ಗಲ್ಲಿಯ ಸುಮಾರು 50 ರಿಂದ 60 ಮನೆಗಳ ಮುಂದೆ ಅಳವಡಿಸಲಾಗಿದ್ದ ನೀರಿನ ನಳಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ನಳಗಳನ್ನು ಅಳವಡಿಸುವಾಗ ಗುತ್ತಿಗೆದಾರರು ಅಥವಾ ಸಿಬ್ಬಂದಿ ಪೈಪ್‌ಗಳಿಗೆ ಸರಿಯಾಗಿ ಗಮ್ (ಸೊಲ್ಯೂಷನ್) ಹಚ್ಚದೇ ಹಾಗೇ ಬಿಟ್ಟಿರುವುದು ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ. ಯಾವುದೇ ಶ್ರಮವಿಲ್ಲದೇ ಸುಲಭವಾಗಿ ನಳಗಳನ್ನು ಕಿತ್ತುಕೊಂಡು ಹೋಗಲು ಕಳ್ಳರಿಗೆ ಇದು ಅನುಕೂಲ ಮಾಡಿಕೊಟ್ಟಂತಾಗಿದೆ. ಬೆಳಗ್ಗೆ ಎದ್ದು ನೋಡಿದಾಗ ನಳಗಳು ಮಾಯವಾಗಿ ನೀರು ಪೋಲಾಗುತ್ತಿರುವುದನ್ನು ಕಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕಳಪೆ ಕಾಮಗಾರಿ ಹಾಗೂ ಕಳ್ಳರ ಕಾಟದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Tags:

error: Content is protected !!