Belagavi

ಮಾಜಿ ಸೈನಿಕರ ಸಮಸ್ಯೆಗಳ ಕುರಿತು ರಾಜ್ಯಪಾಲರ ಗಮನ ಸೆಳೆದ ಮಹಾಒಕ್ಕೂಟ: ಜಗದೀಶ ಪೂಜೇರಿ

Share

ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಹಾಗೂ ಪದಾಧಿಕಾರಿಗಳ ತಂಡ ನಿನ್ನೆ ಲೋಕ ಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಗಿಲ್ ವಿಜಯೋತ್ಸವಕ್ಕೆ ರಾಜ್ಯಪಾಲರನ್ನು ಆಹ್ವಾನಿಸುವದರೊಂದಿಗೆ ಮಾಜಿ ಸೈನಿಕರು ಹಾಗೂ ವೀರನಾರಿಯರ ಸಮಸ್ಯೆಗಳ ಕುರಿತಾಗಿ ರಾಜ್ಯಪಾಲರ ಗಮನ ಸೆಳೆದರು.

ಇದೇ ತಿಂಗಳ ಜುಲೈ 26 ರಂದು ಮಹಾಒಕ್ಕೂಟದ ವತಿಯಿಂದ ಆಯೋಜಿಸಲಾಗಿರುವ 27ನೆಯ ಕಾರ್ಗಿಲ್ ವಿಜಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುವಂತೆ ರಾಜ್ಯಪಾಲರನ್ನು ಆಮಂತ್ರಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಸೈನಿಕರು ಹಲವಾರು ವರ್ಷಗಳಿಂದ ಎದುರಿಸುತ್ತಿರುವಂತಹ ಸಮಸ್ಯೆಗಳು ಹಾಗೂ ಸರ್ಕಾರದಿಂದ ಸಿಗಬೇಕಾಗಿರುವ ಸವಲತ್ತುಗಳ ಕುರಿತಾಗಿ ರಾಜ್ಯಪಾಲರ ಗಮನ ಸೆಳೆಯಲಾಯಿತು.

ಮುಖ್ಯವಾಗಿ 10% ಮೀಸಲಾತಿ ನಿವೃತ್ತ ಮಾಜಿ ಸೈನಿಕರಿಗೆ ರಾಜ್ಯ ಸರ್ಕಾರ ಡಿ ಗ್ರೂಪ್ ನ ಎಲ್ಲಾ ಹುದ್ದೆಗಳಲ್ಲಿ ರಾಜ್ಯ ಸರ್ಕಾರಿ ನೌಕರಿಯಲ್ಲಿ 10 ಪ್ರತಿಶತ ಮೀಸಲಾತಿ ಇದ್ದು ಈ ಮೀಸಲಾತಿ ಸಿಗದೇ 40 ರಿಂದ 60 ವರ್ಷದ ಅತಿ ಹೆಚ್ಚಿನ ಸಂಖ್ಯೆಯ ಮಾಜಿ ಸೈನಿಕರು ಇವತ್ತು ಕೆಲಸವಿಲ್ಲದೆ ಅಲೆಯುವಂತಾಗಿದೆ. ಈ ಮೀಸಲಾತಿ ಸರಿಯಾಗಿ ದೊರೆತರೆ ನಮ್ಮ ಎಲ್ಲಾ ಮಾಜಿ ಸೈನಿಕರು ನಿವೃತ್ತಿಯ ನಂತರ ಪುನರ್ವಸತಿಗಾಗಿ ರಾಜ್ಯ ಸರ್ಕಾರಿ ನೌಕರಿ ಪಡೆದು ಅತ್ತಿತ್ತ ಅಲೆಯದಂತಾಗುತ್ತದೆ.

ನಿವೇಶನ ಕಳೆದ ಹಲವು ದಶಕಗಳಿಂದ ಮಾಜಿ ಸೈನಿಕರಿಗೆ ಹಾಗೂ ವೀರನಾರಿಯರಿಗೆ ಸಿಗಬೇಕಾಗಿರುವ ಭೂಮಿಯ ಸೌಲಭ್ಯ ಇದುವರೆಗೂ ದೊರೆತಿಲ್ಲ ಹಲವಾರು ವರ್ಷಗಳಿಂದ ನಮ್ಮ ಮಾಜಿ ಸೈನಿಕರು ಕಾರ್ಯಾಲಯದ ಸುತ್ತ ಚಕ್ಕರ್ ಹೊಡೆಯುತ್ತಿದ್ದು ರಾಜಕೀಯ ನಾಯಕರ ಆಶ್ವಾಸನೆಗೆ ಬೆಲೆ ಇಲ್ಲದಂತಾಗಿದೆ ಪ್ರತಿ ಅಧಿವೇಶನದಲ್ಲಿ ಹೇಳಿಕೆಯನ್ನು ನೀಡಿ ಜಾರಿಕೊಳ್ಳುತ್ತಿರುವ ಸರ್ಕಾರದ ನಡೆ ವಿಪರ್ಯಾಸದ ಸಂಗತಿ ಆಗಿದೆ.
ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಯುದ್ಧ ಹಾಗೂ ಯುದ್ಧದಂತಹ ಪರಿಸ್ಥಿತಿಗಳಲ್ಲಿ ದೇಶದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದಂತಹ ಸೈನಿಕರ ಕುಟುಂಬದವರಿಗೆ ರಾಜ್ಯ ಸರ್ಕಾರಿ ನೌಕರಿ ನೀಡಬೇಕೆಂದು ಹಲವು ವರ್ಷಗಳ ಬೇಡಿಕೆ ಇದ್ದು ಇದುವರೆಗೆ ರಾಜ್ಯ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಕಾರ್ಗಿಲ್ ಯುದ್ಧ ಮುಗಿದು 27 ವರ್ಷಗಳು ಪೂರೈಸುತ್ತಿದ್ದರು ಇದುವರೆಗೆ ಯುದ್ಧದಲ್ಲಿ ಹುತಾತ್ಮರಾದ ಕುಟುಂಬದವರಿಗೆ ಕೆಲಸವಿಲ್ಲದೆ ಅವರ ಮಕ್ಕಳು ಕೂಲಿ ಕೆಲಸವನ್ನ ಮಾಡುತ್ತಿದ್ದಾರೆ. ಯುದ್ಧದಂತಹ ಸನ್ನಿವೇಶಗಳಲ್ಲಿ ಹುತಾತ್ಮರಾದ ಚಿಕ್ಕ ವಯಸ್ಸಿನ ಸೈನಿಕರ ಪತ್ನಿಯರು ತಮ್ಮ ಮುಂದಿನ ಜೀವನ ನಡೆಸುವುದು ಕಷ್ಟವಾಗಿದ್ದು ಅವರಿಗೆಲ್ಲ ಅವರ ವಿದ್ಯಾರ್ಹತೆಗೆ ತಕ್ಕಂತೆ ರಾಜ್ಯ ಸರ್ಕಾರಿ ನೌಕರಿಯಲ್ಲಿ ಆದ್ಯತೆ ನೀಡಬೇಕೆಂದು ಹಲವು ವರ್ಷಗಳ ಬೇಡಿಕೆ ಇದೆ.
ಟೋಲ್ ಪ್ಲಾಜಾ ವಿನಾಯಿತಿ
ರಾಜ್ಯ ಸರ್ಕಾರಿ ನೌಕರಿಯಲ್ಲಿ ಸೇವೆಸಲ್ಲಿಸುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು ರಾಜಕಾರಣಿಗಳಿಗೆ ಟೋಲ್ ಪ್ಲಾಜಾ ಗಳಲ್ಲಿ ವಿನಾಯಿತಿ ಇದ್ದು ದೇಶಕ್ಕಾಗಿ 17ರಿಂದ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸೈನಿಕರಿಗೆ ಟೋಲ್ ರಿಯಾಯಿತಿ ಇಲ್ಲ ಹಾಗೂ ಟೋಲ್ ಪ್ಲಾಜಾ ಸಿಬ್ಬಂದಿ ಮಾಜಿ ಸೈನಿಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ ಎಂಬುದು ಮಾಜಿ ಸೈನಿಕರಿಗೆ ನೋವಿನ ಸಂಗತಿಯಾಗಿದೆ.

ಸೈನಿಕ ಭವನ
ಜಿಲ್ಲೆಯಲ್ಲಿ 36,000 ಕ್ಕಿಂತ ಹೆಚ್ಚು ಜನ ಮಾಜಿ ಸೈನಿಕರಿದ್ದು ಸಂಘಟನಾತ್ಮಕವಾಗಿ ಮಾಜಿ ಸೈನಿಕರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು ಹೀಗಿರುವಾಗ ದೇಶಭಕ್ತಿಯ ಹಾಗೂ ಸೈನಿಕರ ಸಭೆ ಸಮಾರಂಭಗಳನ್ನು ನಡೆಸಲು ನಮ್ಮದೇ ಆದ ಒಂದು ಸೈನಿಕ ಭವನ ಬೇಕೆನ್ನುವುದು ಹಲವು ದಶಕಗಳ ಬೇಡಿಕೆಯಾಗಿದ್ದು ಈ ಬೇಡಿಕೆಯು ಕೂಡ ನೆಲೆಗುದಿಗೆ ಬಿದ್ದಿದೆ.

ಇನ್ನು ಹಲವಾರು ಮಾಜಿ ಸೈನಿಕರ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ರಾಜ್ಯಪಾಲರ ಗಮನಕ್ಕೆ ತಂದು ಆದಷ್ಟು ಬೇಗನೆ ಕ್ರಮ ಕೈಗೊಳ್ಳುವಂತೆ ವಿನಂತಿ ಪತ್ರವನ್ನು ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಗೌರವಾಧ್ಯಕ್ಷ ರಮೇಶ ಚೌಗಲಾ, ಕಾರ್ಯದರ್ಶಿ ಶಿವಬಸಪ್ಪ ಕಾಡನ್ನವರ ಉಪಾಧ್ಯಕ್ಷ ಸಂಗಪ್ಪ ಮೇಟಿ, ಜಂಟಿ ಕಾರ್ಯದರ್ಶಿ ಮಹೇಶ ಕಮ್ಮಾರ, ಬಸವಂತಪ್ಪ ಮುಗಡ್ಲಿ ಮುಂತಾದವರು ಉಪಸ್ಥಿತರಿದ್ದರು.

Tags:

error: Content is protected !!