Dharwad

ಧಾರವಾಡ ಜಿಲ್ಲಾ ಆಸ್ಪತ್ರೆ ಸರ್ಜನ್ ವರ್ಗಾವಣೆ ರದ್ದು ಪಡಿಸಲು ಆಗ್ರಹಿಸಿ ಪ್ರತಿಭಟನೆ..

Share

ಧಾರವಾಡ ಜಿಲ್ಲಾ ಆಸ್ಪತ್ರೆಯ ಸರ್ಜನ್ ಸಂಗಪ್ಪ ಗಾಬಿಯರ ವರ್ಗಾವಣೆ ಆದೇಶ ಖಂಡಿಸಿ ಹಾಗೂ ವರ್ಗಾವಣೆ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ, ಧಾರವಾಡದಲ್ಲಿ ಸರ್ಜನ್ ಪರವಾಗಿ ಸಂಘಟನೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧಾರವಾಡ ಧ್ವನಿ ಸಂಘಟನೆಯ ಪದಾಧಿಕಾರಿಗಳು ಸೇರಿ ಮುಖಂಡರು ಪ್ರತಿಭಟನೆ ನಡೆಸಿ, ಧಾರವಾಡ ಜಿಲ್ಲಾ ಆಸ್ಪತ್ರೆಯ ಸರ್ಜನ್ ಪರ ಘೋಷಣೆ ಕೂಗಿ ಅಸಮಧಾನ ಹೊರ ಹಾಕಿದರು. ಧಾರವಾಡ ಜಿಲ್ಲಾ ಆಸ್ಪತ್ರೆಗೆ ಸಂಗಪ್ಪ ಗಾಬಿ ಅವರು ಅಧಿಕಾರ ಸ್ವೀಕಾರ ನಂತರ, ಜನತೆಗೆ ಉತ್ತಮ‌ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಸಾರ್ವಜನಿಕ ತುರ್ತು ಚಿಕಿತ್ಸೆಯ ಘಟಕದಲ್ಲಿಯು ಒಳ್ಳೆಯ ಬದಲಾವಣೆ ತಂದಿದ್ದಾರೆ. ಜತೆಗೆ ಗರ್ಭಿಣಿ ಮಹಿಳೆಯರ ಚಿಕಿತ್ಸೆ ಸ್ಪಂದನೆ ಸೇರಿ ಹೇರಿಗೆ ಆಸ್ಪತ್ರೆಯಲ್ಲಿ ಒಳ್ಳೆಯ ಸ್ಪಂದನೆ ಕಾರ್ಯ ಮಾಡುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಜನ ಸ್ನೇಹಿ ಕಾರ್ಯ ಮಾಡುತ್ತಿರುವ ಸರ್ಜನ್ ಸಂಗಪ್ಪ ಅವರ ವರ್ಗಾವಣೆ ಸರ್ಕಾರ ಮಾಡಿರುವುದು ಸರಿಯಲ್ಲ. ಈ ಕೂಡಲೇ ಸರ್ಜನ್ ಸಂಗಪ್ಪ ಗಾಬಿ ಅವರ ವರ್ಗಾವಣೆಯನ್ನು ರಾಜ್ಯ ಆರೋಗ್ಯ ಸಚಿವರು ಹಿಂಪಡೆದು, ಅವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯ ಸರ್ಜನ್ ಆಗಿ ಮುಂದುವರೆಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ವರ್ಗವಾಣೆ ಮಾಡಿದೇ ಆದಲ್ಲಿ ಉಗ್ರ ಹೋರಾಟದ ಕಡೆ ಚಿಂತನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Tags:

error: Content is protected !!