ಅದ್ಯಾಕೋ ಏನೋ ಅನ್ನದಾತರ ಮೇಳೆ ಈ ವರ್ಷ ಮುಂಗಾರು ಮಳೆ ಚೆಲ್ಲಾಟ ಜೋರಾಗಿದೆ. ಕಷ್ಟಪಟ್ಟು ಸಾಲಾ ಸೋಲಾ ಮಾಡಿ ಈ ಬಾರಿಯಾದರೂ ನಮ್ಮ ಬಾಳು ಸರಿ ಹೋಗುತ್ತದೆ ಎಂಬ ಮಳೆರಾಯನ ಮೇಲೆ ನಂಬಿಕೆ ಇಟ್ಟು ಬಿತ್ತನೆ ಮಾಡಿದ ಬೆಳೆ ಮಳೆ ಇಲ್ಲದೆ ಕಮರಿ ಹೋಗುತ್ತಿದ್ದು, ಸ್ವತಃ ತಾನೇ ಬೆಳೆದ ಬೆಳೆಯನ್ನು ಈಗ ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ನಾಶ ಮಾಡಿದ್ದಾನೆ.

ಹೌದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದ ರೈತ ಪ್ರವೀಣ ಆರಂಭದ ಮುಂಗಾರು ಮಳೆ ಆಗಮನದಿಂದ ಸಾಕಾ ಸೋಲಾ ಮಾಡಿ ಹತ್ತು ಏಕರೆಯ ತಮ್ಮ ಕೃಷಿ ಭೂಮಿಯಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆ ಬಳಿಕ ವರಣು ಕೈ ಕೊಟ್ಟ ಹಿನ್ನಲೆಯಲ್ಲಿ ಈರುಳ್ಳಿ ಬೆಳೆ ಬಿಸಿಲಿನ ತಾಪ್ಪಕ್ಕೆ ಕಮರಿ ಹೋಗಿದೆ. ಇದರಿಂದ ಕಣ್ಣೀರು ಹಾಕುತ್ತಲೇ ಅನ್ನದಾತ ಈಗ ತಾನೇ ಸ್ವತಃ ಬಿತ್ತನೆ ಮಾಡಿದ ಬೆಳೆಯನ್ನು, ಟ್ಯಾಕ್ಟರ್ ಮೂಲಕ ನಾಶ ಮಾಡಿದ್ದಾನೆ. ಈರುಳ್ಳಿ ಬೆಳೆಗೆ ಪ್ರತಿ ಏಕರೆಗೆ 40-30 ಸಾವಿರ ಹಣ ಖರ್ಚಾಗಿದ್ದು, ಮತ್ತೆ ಅನ್ನದಾತನನ್ನು ಮುಂಗಾರು ಸಾಲದ ಸುಳಿಗೆ ತಳ್ಳಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಕೂಡಲೇ ಸಂಕಷ್ಟದಲ್ಲಿರುವ ಅನ್ನದಾತರ ಸಹಾಯಕ್ಕೆ ಬರಬೇಕು. ಕೇವಲ ಬೆಂಗಳೂರಿನಲ್ಲಿ ಕುಳಿತು ಆಡಳಿತ ಮಾಡುವುದಕ್ಕಿಂತ ಉತ್ತರ ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬುವುದನ್ನು ತಿಳಿಯುವ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
