ಕಳೆದ ಏಪ್ರಿಲ್ 10ರಂದು ಧಾರವಾಡದ ಮಾಳಾಪುರದ ಹಾಶ್ಮಿ ನಗರದಲ್ಲಿ ಕೈ ಪಕ್ಷದ ಯುವ ಮುಖಂಡ ಫೈರೋಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆ ಮರಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರನಿಗೆ ಕೊನೆಗೂ ಈಗ ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ಮಾಡಿದೆ.

ಕಳೆದ ಏಪ್ರಿಲ್ 10ರಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದು ಫೈರೋಜ ಪಠಾಣ್‌ನನ್ನು ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಲಾಯಿತು. ಕೊಲೆಯ ನಂತರ ಎರಡು ಹಂತದಲ್ಲಿ 13 ಜನರ ಧಾರವಾಡ ಉಪನಗರ ಠಾಣೆಯ ಪೊಲೀಸರು ಬಂಧನ ಮಾಡಿದ್ದರು. ನಂತರ ಇನ್ನೂಳಿದ ಆರೋಪಿಗಾಗಿ ಬಂಧನಕ್ಕೆ ಬಲೆ ಬಳಸಲಾಗಿತ್ತು. ಆದರೆ ಬಂಧನ ಭೀತಿಯಿಂದ ವಿದೇಶಕ್ಕೆ ಹಾರಿದ ಕೈ ಮುಖಂಡ ಇಸ್ಮಾಯಿಲ್ ತಮಾಟಗಾರವರು, ತಮ್ಮ ವಕೀಲರ ಮೂಲಕ ಬೆಲ್ ಅಪ್ಲಿಕೇಶನ್ ಹಾಕಿಕೊಂಡಿದ್ದರು. ಸದ್ಯ ಈಗ ಧಾರವಾಡ ಹೈಕೋರ್ಟ್ ಕೊಲೆ ಪ್ರಕರಣದ 14 ನೇ ಆರೋಪಿಯಾಗಿರುವ ಇಸ್ಮಾಯಿಲ್ ತಮಾಟಗಾರನಿಗೆ ಈಗ ಜಾಮೀನು ಮಂಜೂರು ಮಾಡಲಾಗಿದೆ. ಪೈರೋಜ್ ಕೊಲೆ ಕೊಲೆ ಪ್ರಕರಣದಲ್ಲಿ ಕೊಲೆ ಸಂಚಿನ ಕೈವಾಡ ಆರೋಪವನ್ನು ಫೈರೋಜ್ ಸಂಬಂಧಿಗಳು ಮಾಡಿದ್ದರು, ಆರೋಪ ಕುರಿತು ಆಡಿಯೋ ಬಿಡುಗಡೆಯಾಗುತ್ತಿದಂತೆ ಇಸ್ಮಾಯಿಲ್‌ರವರು ವಿದೇಶಕ್ಕೆ ಹಾರಿದ್ದರು. ಸದ್ಯ ಇಸ್ಮಾಯಿಲ್ ಅವರಿಗೆ ಹೈಕೋರ್ಟ ಬಿಗ್ ರಿಲೀಫ್ ನೀಡಿದೆ.
