Belagavi

ಬಬನ್ ಭೋಬೆ ಮಿತ್ರ ಮಂಡಳ ಹಾಗೂ ವಿಮಲ್ ಫೌಂಡೇಶನ್‌ನಿಂದ ಗವಳಿ ಗಲ್ಲಿಯ ಬಡ ವಿದ್ಯಾರ್ಥಿಗಳಿಗೆ ಕೊಡೆ, ಬಕೇಟ್ ಹಾಗೂ ಗಡಿಯಾರ ವಿತರಣೆ

Share

ಸಾಮಾಜಿಕ ಕಳಕಳಿಯ ಭಾಗವಾಗಿ ಬೆಳಗಾವಿಯ ಗವಳಿ ಗಲ್ಲಿಯ ಶಾಲೆ ನಂಬರ್ 22ರ ಬಡ ವಿದ್ಯಾರ್ಥಿಗಳಿಗೆ ಬಬನ್ ಭೋಬೆ ಮಿತ್ರ ಮಂಡಳ, ವಿಮಲ್ ಫೌಂಡೇಶನ್ ಹಾಗೂ ಸಮೃದ್ಧಿ ಫೌಂಡೇಶನ್ ವತಿಯಿಂದ ಕೊಡೆ ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಮಲ್ ಫೌಂಡೇಶನ್‌ನ ಸಂಚಾಲಕರಾದ ಕಿರಣ್ ಜಾಧವ್ ಹಾಗೂ ಬಬನ್ ಭೋಬೆ ಅವರು ವಿದ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸಿದರು. ಇದೇ ವೇಳೆ ಗೋಂಧಳಿ ಗಲ್ಲಿಯ ವೈದ್ಯರಾದ ಡಾ. ಧೀರಜ್ ದಿನಕರ ಪಾಟನೇಕರ ಅವರು ವಿದ್ಯಾರ್ಥಿಗಳಿಗೆ ಕೊಡೆಗಳನ್ನು ಒದಗಿಸಿದ್ದಲ್ಲದೆ, ಸಮೃದ್ಧಿ ಫೌಂಡೇಶನ್ ವತಿಯಿಂದ ಬಕೇಟು ಹಾಗೂ ಗಡಿಯಾರಗಳನ್ನು ಸಹ ವಿತರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದರು. ಅತ್ಯಂತ ಯಶಸ್ವಿಯಾಗಿ ಜರುಗಿದ ಈ ಸೇವಾ ಕಾರ್ಯಕ್ರಮದಲ್ಲಿ ಪ್ರಮುಖರಾದ ಎಫ್. ಎಲ್. ಕದಮ್, ಮಂದಾ ನೇವಗಿ, ಸುಹಾಸ್ ಶಿಂಧೆ, ಶಶಿಕಾಂತ್ ಮಾಂಜರೇಕರ, ವೈಜನಾಥ ಪಾಟೀಲ್, ಸಂತೋಷ ಪುರೋಹಿತ, ಯುವರಾಜ್ ಖಂಡಾಗಲೆ, ಕೃಷ್ಣಾ ಪವಾರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಹರಸಿದರು.

Tags:

error: Content is protected !!