Chikkodi

ಜೀವ ಉಳಿಸುವ ವೈದ್ಯರು ದೇವರಿಗೆ ಸಮ: ಡಾ. ಅರವಿಂದ ಮಿಣಚೆ

Share

ಜನರು ವೈದ್ಯರಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ, ವೈದ್ಯರನ್ನು ನಂಬಿ ಬಂದ ರೋಗಿಗಳನ್ನು ತಾಯಿಯಂತೆ ಮಮತೆಯಿಂದ ಮತ್ತು ಭರವಸೆಯ ನುಡಿಗಳನ್ನು ಆಡಿಜನರ ಆಶೋತ್ತರಗಳಿಗೆ ಸ್ಪಂದಿಸಿ ಗುಣಮಟ್ಟದಚಿಕಿತ್ಸೆ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು”ಎಂದು ಕೆ ಎಲ್ ಇ ಆಸ್ಪತ್ರೆಯ ಸ್ರೀರೋಗ ಹಾಗೂ ಪ್ರಸೂತಿ ವಿಭಾಗದ ವೈದ್ಯರಾದ ಡಾ. ಅರವಿಂದ ಮಿಣಚೆ ಹೇಳಿದರು.

ಅವರು ಇಂದು ಚಿಕ್ಕೋಡಿಯ ಕೆ ಎಲ್ ಇ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವೈದ್ಯನು ಸದಾ ಜಾಗೃತನಾಗಿರಬೇಕು ಅವನು ಮಾಡಬಹುದಾದ ಒಂದು ಸಣ್ಣತಪ್ಪು ಒಂದು ಜೀವಕ್ಕೆ ಕುತ್ತಾಗಬಹುದು. ಹೀಗಾಗಿ ಪ್ರತಿಕ್ಷಣದಲ್ಲಿಯೂ ಮೈಯೆಲ್ಲ ಕಣ್ಣಾಗಿಟ್ಟುಕೊಂಡಿರಬೇಕು.“ಮುಖವಾಡದ ಹಿಂದೆ ವೈದ್ಯರನ್ನು ಗುಣಪಡಿಸುವವರು ಯಾರು?”ಎಂದು ಈ ವಷ೯ದ ಧ್ಯೇಯವಾಕ್ಯವಾಗಿದೆ.ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅನೇಕ ಜೀವಗಳನ್ನು ಉಳಿಸಿದ್ದನ್ನು ನಾವೆಲ್ಲ ನೋಡಿದ್ದೇವೆ. ಇದು ಯಾವುದೇ ಕಠಿಣ ಸಂದರ್ಭಗಳಲ್ಲೂ ಜನರ ಪ್ರಾಣರಕ್ಷಣೆಗೆ ವೈದ್ಯ ಸಮೂಹ ನಿಲ್ಲುತ್ತದೆ ಆದ್ದರಿಂದ ವಿದ್ಯಾರ್ಥಿಗಳು ತಮ್ಮಗುರಿಯನ್ನು ಸಾಧಿಸಲು ಶಿಕ್ಷಕರು ಹೇಳಿದ ಹಾಗೆ ಅತ್ಯಂತ ಪ್ರಾಮಾಣಿಕತೆ ಮತ್ತು ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಿ ಗುರಿಮಟ್ಟಬಹುದು ಎಂದು ಅವರ ವೈದ್ಯಕೀಯ ಶಿಕ್ಷಣದ ಹಾಗೂ ವೃತ್ತಿ ಅನುಭವಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಕೆ ಎಲ್ ಇ ಯ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ.ಕಿರಣ ಮುತ್ನಾಳಿ ಮಾತನಾಡುತ್ತಾ ವೈದ್ಯೋ ನಾರಾಯಣೋ ಹರಿ: ಎಂಬ ಉಕ್ತಿಯ ಮೂಲಕ ವೈದ್ಯರಲ್ಲೂದೇವರನ್ನು ಕಾಣುವ ಪರಂಪರೆ ನಮ್ಮದು. ವೈದ್ಯರ ಪಾತ್ರ ಹಾಗೂ ನಿಸ್ವಾರ್ಥ ಭಾವದಿಂದ ನೀಡುವ ಆರೈಕೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಅವರು ತೋರುವ ಸೇವೆ ಹಾಗೂ ಚಿಕಿತ್ಸೆಯು ಸಾಮಾನ್ಯ ಮನುಷ್ಯನ ಜೀವಕ್ಕೆ ಅಪಾಯ ಬಂದಾಗ ವೈದ್ಯರು ಮಾತ್ರ ಅವರ ಜೀವವನ್ನು ಉಳಿಸುವ ಸಾಮರ್ಥ್ಯ ಹೊಂದಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಆಗುವ ಬದಲಾವಣೆಗಳ ಕುರಿತು ಅಧ್ಯಯನ ಮಾಡಿದ್ದಲ್ಲಿ ಮುಂದೆ ಸಮಾಜದಲ್ಲಿ ಉತ್ತಮ ವೈದ್ಯರಾಗುವಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಉಜಮಾ ಕೌಸದ ನಿರೂಪಿಸಿದರು, ಹಾಗೂ ವಂದನಾರ್ಪನೆಯನ್ನು ಡಾ.ಆರತಿ ನೆರವೆರಿಸಿದರು, ಕಾರ್ಯಕ್ರಮದಲ್ಲಿ ಆಯುರ್ವೇದ ಕಾಲೇಜಿನಲ್ಲಿ ಹೆಚ್ಚು ಸೇವೆ ಸಲ್ಲಿಸಿದ ಡಾ.ಬಿ ಬಿ ದೇಸಾಯಿ, ಡಾ. ಸೂರಜ ಕುಂಬಾರ, ಡಾ. ಬಾಹುಬಲಿ ಮಹಾಜನ ರವರನ್ನು ಸತ್ಕರಿಸಿದರು ಕಾರ್ಯಕ್ರಮದಲ್ಲಿ ಮಹಾಂತೇಶ ಗುಡ್ನವರ ಉಪನ್ಯಾಸಕರಾದ ಡಾ.ಶ್ರೀಧರ ಲಕ್ಕುಂಡಿ, ಡಾ. ಸುಜಾತಾ ಬರಮೊಜಿ, ಡಾ.ರವಿ ಮಡಿವಾಳರ, ಮತ್ತು ಉಪನ್ಯಾಸಕರು, ವೈದ್ಯರು, ವಿದ್ಯಾರ್ಥಿಗಳು ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:

error: Content is protected !!