Hukkeri

ಹುಕ್ಕೇರಿ : ನಿವೃತ್ತಿ ಯಾದರೂ ಮರಾಠಿ ಶಾಲೆಯಲ್ಲಿ ಕನ್ನಡ ಕಲಿಸುವೆ – ಸರೋಜಾ ತುಪ್ಪದ.

Share

ನಾನು ಶಿಕ್ಷಕಿಯಾಗಿ ಸೇವೆಯಿಂದ ನಿವೃತ್ತಿ ಹೊಂದಿದರು ಸಹ ಮರಾಠಿ ಶಾಲೆಯಲ್ಲಿ ಕನ್ನಡ ಕಲಿಸುವೆ ಎಂದು ಇಂದು ನಿವೃತ್ತಿ ಯಾಗುವ ಗಡಿ ಭಾಗದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯೆ ಶ್ರೀಮತಿ ಸರೋಜಾದೇವಿ ತುಪ್ಪದ ಹೇಳಿದರು.

ಸರಕಾರಿ ಶಾಲೆ ಶಿಕ್ಷಕರು ನಿವೃತ್ತಿ ಹೊಂದಿ ಸುಖಮಯ ಜೀವನ ನಡೆಸಲು ಪ್ರಯತ್ನಿಸುವ ಈ ಕಾಲದಲ್ಲಿ ಹುಕ್ಕೇರಿ ತಾಲೂಕಿನವರಾದ ಶ್ರೀಮತಿ ಸರೋಜಾ ತುಪ್ಪದ ರವರು ಕಳೆದ 35 ವರ್ಷಗಳಿಂದ ಗಡಿಭಾಗದ ನಿಪ್ಪಾಣಿಯ ಕಟ್ಟ ಕಡೆಯ ಗ್ರಾಮ ಆಡಿ ಯಲ್ಲಿ ಸೇವಾ ನಿವೃತ್ತಿ ಹೊಂದುವ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ನನಗೆ ಸರಕಾರ ಸೇವಾ ನಿವೃತ್ತಿ ನಿಡಬಹುದು ಆದರೆ ನಾನು ಕಳೆದ 35 ವರ್ಷಗಳಿಂದ ಗಡಿಭಾಗದ ಮರಾಠಿ ಮಕ್ಕಳಿಗೆ ಕನ್ನಡ ಕಲಿಸುವ ಮೂಲಕ ನಮ್ಮ ಮಾಡು ನುಡಿಯನ್ನು ಬೆಳೆಸಲು ಪ್ರಯತ್ನ ಮಾಡಿದ್ದೆನೆ, ಇನ್ನೂ ಮುಂದೆಯೂ ಸಹ ನಾನು ಮರಳಿ ನನ್ನ ಊರಿಗೆ ತೇರಳದೆ ಇಲ್ಲಿಯ ಮರಾಠಿ ಮಕ್ಕಳಿಗೆ ಕನ್ನಡ ಕಲಿಸುವ ಆಸೆ ಹೊಂದಿದ್ದೆನೆ ಎಂದರು
ನಿವೃತ್ತಿ ದಿನ ಶಾಲಾ ಮಕ್ಕಳು ತಮ್ಮ ನೆಚ್ಚಿನ ಮುಖ್ಯೋಪಾಧ್ಯಾಯೆ ಯರಿಗೆ ನೆಚ್ಚಿನ ಕಾಣಿಕೆ ನೀಡಿ ಪುಷ್ಪಾರ್ಪಣೆ ಮಾಡುವ ಮೂಲಕ ಆತ್ಮಿಯವಾಗಿ ಬಿಳ್ಕೋಟ್ಟರು.

ನಂತರ ನಡೆದ ಸಮಾರಂಭವನ್ನು ಎಸ್ ಡಿ ಎಂ ಸಿ ಅದ್ಯಕ್ಷೆ ರಾಜಶ್ರೀ ಪಾಟೀಲ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಶಿಕ್ಷಣ ಇಲಾಖೆ ವತಿಯಿಂದ
ಪ್ರಮೋದ ಮಟ್ಟಿ, ಸಚಿನ ರಾಮನಕಟ್ಟಿ, ವಿದ್ಯಾ ಚಂದ್ರಕೋಡಿ, ಮಮತಾ ಗುಂಜಾರ ರವರು ನಿವೃತ್ತಿ ಹೊಂದುತ್ತಿರುವ ಪ್ರಧಾನ ಗುರುಮಾತೆ ತುಪ್ಪದ ವರಗೆ ಸತ್ಕರಿಸಿ ಅಭಿನಂದಿಸಿದರು.
ವೇದಿಕೆ ಮೇಲೆ ಕೇಂದ್ರ ಮುಖ್ಯೋಪಾಧ್ಯಾಯ ಎಸ್ ಡಿ ದಂಡಿನವರ, ನಿವೃತ್ತ ಶಿಕ್ಷಕರಾದ ರಮೇಶ ಭಾಯನಾಯ್ಕ, ಎ ಎಸ್ ಶಿಂತ್ರೆ , ಶಂಕರಗೌಡಾ ಪಾಟೀಲ, ಬಾಳು ನಿಪ್ಪಾಣಿ ಉಪಸ್ಥಿತರಿದ್ದರು.

ನಂತರ ಭಾಯನಾಯ್ಕ ಬಂಧುಗಳು ನಿವೃತ್ತಿ ಹೊಂದಿದ ಗುರುಮಾತೆಯ ದಂಪತಿಗಳಿಗೆ ಸತ್ಕರಿಸಿ ಮಾತನಾಡಿದ ಸೌಮ್ಯಾ ಭಾಯನಾಯ್ಕ ಪ್ರತಿ ದಿನ ಶಾಲೆಯ ಮತ್ತು ಮಕ್ಕಳ ಬಗ್ಗೆ ಅಪಾರ ಕಾಳಜಿ ವಹಿಸಿ ಕನ್ನಡ ಪ್ರೇಮವನ್ನು ಬೇಳೆಸಿದ ಸರೋಜಾ ಮೇಡಂರವರ ನಿವೃತ್ತಿ ಜೀವ ಸುಖಮಯವಾಗಲಿ ಎಂದು ಹಾರೈಸಿದರು
ಈ ಸಂದರ್ಭದಲ್ಲಿ ಹುಕ್ಕೇರಿ, ನಿಪ್ಪಾಣಿ, ಆಡಿ ಸೇರಿದಂತೆ ಧಾರವಾಡ ತುಪ್ಪದ ಬಂದುಗಳು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಜು ಬಾಗಲಕೋಟ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!