ಪ್ರತಿಯೊಬ್ಬರು ಜ್ಯೋತಿ ಪೂಜೆ ಮಾಡುವದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಬೆಳಗಾವಿಯ ಜ್ಯೋತಿ ಪೂಜೆ ಮಂಡಳ ವಕ್ತಾರೆ ಶ್ರೀಮತಿ ಗೌರಿ ದಿವಟಾರ ಹೇಳಿದರು.

ಹುಕ್ಕೇರಿ ನಗರದ ರವದಿ ಫಾರ್ಮ ಹೌಸದಲ್ಲಿ ಆಯೋಜಿಸಿದ ಜ್ಯೋತಿ ಪೂಜೆ ಮತ್ತು ಅದರ ಮಹತ್ವ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಗೌರಿ ದಿವಟಾರ ಮಾತನಾಡಿ ವಿಶ್ವದ ಮಹತ್ತರವಾದ ಏಳು ಧರ್ಮಗಳು ಮಡಿಯಾಳ ಕ್ಷೇತ್ರದಲ್ಲಿ ಕಳೆದ ನೂರು ವರ್ಷಗಳಿಂದ ಜ್ಯೋತಿ ಪೂಜೆ ಪ್ರತಿದಿನ ಮಾಡಲಾಗುತ್ತದೆ, ಇಂದು ಬೆಳಗಾವಿ ಜಿಲ್ಲೆಯ ಪ್ರತಿ ತಾಲೂಕಿನ ಆಸಕ್ತ ಮಹಿಳೆಯರಿಗೆ ಜ್ಯೋತಿ ಪೂಜೆಯ ನಿಯಮಗಳನ್ನು ಹೇಳಲಾಗುತ್ತದೆ ಇದರಿಂದ ನಮ್ಮ ಮನೆಗಳಲ್ಲಿ ಧನಾತ್ಮಕ ಶಕ್ತಿ ಪಡೆಯಬಹುದು ಎಂದರು ..
ಈ ಸಂದರ್ಭದಲ್ಲಿ ಹುಕ್ಕೇರಿ ಜ್ಯೋತಿ ಪೂಜೆ ,ಸತ್ಸಂಗ ಮಹಾಮಂಡಳದವರಾದ
ಮಹಾನಂದ ಪಾಟೀಲ್ ಉಷಾ ರವದಿ ಮಾಯಕ್ಕ, ಮಹಾದೇವಿ ಪಾಟೀಲ, ಸಂಕನ್ನವರ, ಬಾಲಕೃಷ್ಣ ಕೋಳೆಕರ,ವಿಜಯ ರವದಿ ಸೇರಿದಂತೆ ಬೆಳಗಾವಿ, ಸಂಕೇಶ್ವರ್, ಹುಕ್ಕೇರಿಯ ಸತ್ಸಂಗ ಮತ್ತು ಪತಂಜಲಿ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ರಾಜು ಬಾಗಲಕೋಟೆ
ಇನ್ ನ್ಯೂಜ ಹುಕ್ಕೇರಿ.
