ರಾಷ್ಟ್ರೀಯ ಪಲ್ಸ ಪೋಲಿಯೊ ಕಾರ್ಯಕ್ರಮವನ್ನು ಹುಕ್ಕೇರಿ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳ ಲಾಗಿದೆ ಎಂದು ಹುಕ್ಕೇರಿ ತಾಲೂಕಾ ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ ಹೇಳಿದರು
ರಾಷ್ಟ್ರಿಯ ಪಲ್ಸ ಪೋಲಿಯೊ ಅಭಯಾನ ಅಂಗವಾಗಿ ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜರುಗಿದ ಕಾರ್ಯಕ್ರಮವನ್ನು ರಾಷ್ಟ್ರೀಯ ಆರೋಗ್ಯ ನಿಯಂತ್ರಣ ಮಂಡಳಿ ಪ್ರತಿನಿಧಿ ಡಾ, ಬಿ ಎನ್ ಪೈಸ್ ದೀಪ ಬೇಳಗಿಸುವ ಮೂಲಕ ಚಾಲನೆ ನೀಡಿದರು.
ನಂತರ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಎಚ್ ಹೋಳೆಪ್ಪಾ ನವಜಾತ ಶಿಶುಗಳಿಗೆ ಪೋಲಿಯೊ ಹನಿ ಹಾಕಿದರು.


ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಟಿ ಎಚ್ ಓ ಡಾ, ಉದಯ ಕುಡಚಿ ತಾಲೂಕಿನ ಹುಕ್ಕೇರಿ , ಸಂಕೇಶ್ವರ ಮತ್ತು ಹತ್ತರಗಿ ಭಾಗಗಳಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ನೀಡುವ ಉದ್ದೇಶದಿಂದ ಜೂ.28 ರ ಭಾನುವಾರದಂದು ರಾಷ್ಟ್ರೀಯ ಲಸಿಕಾ ದಿನ ಆಚರಿಸಲಾಗುತ್ತಿದೆ, ದೇಶದಲ್ಲಿ
ಕಳೆದ 14 ವರ್ಷಗಳಿಂದ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದರೂ, ಜಗತ್ತಿನ ಕೆಲವು ಭಾಗಗಳಲ್ಲಿ ಹಾಗೂ ಭಾರತದ ನೆರೆ ರಾಷ್ಟ್ರಗಳಲ್ಲಿ ವೈಲ್ಡ್ ಪೋಲಿಯೋ ವೈರಸ್ ಹರಡುವಿಕೆ ಇನ್ನೂ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಭಿಯಾನವನ್ನು ನಡೆಸಲು ಸರ್ಕಾರ ಮುಂದಾಗಿದೆ.

ಇಂದು ಹುಕ್ಕೇರಿ ನಗರದಲ್ಲಿ ಹಾಗೂ
ನಂತರ 2-3 ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. ವಲಸಿಗ ಸಮುದಾಯದ ಮಕ್ಕಳು, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳು ಹಾಗೂ ನಗರ ಪ್ರದೇಶದ ಸ್ಲಂ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದರು.

ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಸಹಕಾರವನ್ನು ಬಯಸಿರುವ ಆರೋಗ್ಯ ಇಲಾಖೆ ಹುಕ್ಕೇರಿ ತಾಲೂಕಿನಲ್ಲಿ ಅ ಸಹಕಾರ ಕಂಡು ಬಂದಿದೆ, ತಾಲೂಕಾ ದಂಡಾಧಿಕಾರಿಗಳು ಸೇರಿದಂತೆ ಯಾವುದೇ ಇಲಾಖೆ ಅಧಿಕಾರಿಗಳು ಸಮಾರಂಭದಲ್ಲಿ ಗೈರು ಹಾಜರು ಎದ್ದು ಕಾಣುತ್ತಿತ್ತು.
ಈ ಸಂಧರ್ಬದಲ್ಲಿ ಮುಖ್ಯ ವೈದ್ಯಾಧೀಕಾರಿ ಡಾ, ಶ್ಯಾಮಲಾ ಪೂಜೇರಿ, ಡಾ, ಸುರೇಶ ಹಿತ್ತಲಮನಿ, ಡಾ, ಸಂತೋಷ ಕೋಣ್ಣೂರ, ಡಾ, ಶಾರದಾ ಕೆ ವಾಯ್, ಡಾ,ದೀಪಕ ಅಂಬಲಿ, ಡಾ, ವಿನೂಸ್ ಬಾಲಪ್ರವೇಶ, ಸೋಮಶೇಖರ ಆರಿಬೆಂಚಿ, ನವೀನ ಭಾಯನಾಯ್ಕ, ಮಂಜುನಾಥ ಆರಿಬೆಂಚಿ,ಸಂತೋಷ ಪಾಟೀಲ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂ ಜ ಹುಕ್ಕೇರಿ.
