ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 2020ರಲ್ಲಿ ಕಾಣೆಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಭೇದಿಸಿ ಪತ್ತೆ ಹಚ್ಚಿದ್ದಾರೆ.

ಜಮಖಂಡಿ ನಿವಾಸಿ ಗುರುಪಾದ ಇಂಚಗೇರಿ ಕಳೆದ 2020ರಲ್ಲಿ ಕಾಣೆಯಾಗಿದ್ದರು. ಆರಂಭಿಕ ತನಿಖೆಯಲ್ಲಿ ಸುಳಿವು ಸಿಗದ ಕಾರಣ ನಾಪತ್ತೆ’ ಎಂದು ಮುಕ್ತಾಯಗೊಂಡಿತ್ತು. ಇತ್ತೀಚೆಗೆ ತಂತ್ರಜ್ಞಾನ ಬಳಸಿ ಪೊಲೀಸರು ವ್ಯಕ್ತಿ ವಿಜಯಪುರದಲ್ಲಿ ಇರುವುದನ್ನು ಪತ್ತೆಹಚ್ಚಿದ್ದಾರೆ. ಪತ್ನಿಯೊಂದಿಗೆ ಮನಸ್ತಾಪದಿಂದ ಮನೆ ಬಿಟ್ಟು ಹೋಗಿದ್ದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಹಾರೂಗೇರಿ ಪೊಲೀಸರ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
