
ಖಾನಾಪೂರ ಪೋಲಿಸ್ ಠಾಣೆಯ ವತಿಯಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ನಿಮಿತ್ಯ ಖಾನಾಪೂರ ಕೆಎಲ್ಇ ಕಾಲೇಜು ಸೇರಿದಂತೆ ಮರಾಠ ಮಂಡಳ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಿತು ಈ ಸಂದರ್ಭದಲ್ಲಿ ಖಾನಾಪೂರ ಪಿಎಸ್ಐ ನಿರಂಜನಸ್ವಾಮಿ ಮತ್ತು ಪ್ರೋಪೆಷನರಿ ಪಿಎಸ್ಐ ಬಸವರಾಜ,ಶಿಲ್ಪಾ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸುವ ಮೂಲಕ ಮಾದಕ ದ್ರವ್ಯಗಳಿಂದ ದೂರವಾಗಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದರು ಈ ಸಂದರ್ಭದಲ್ಲಿ ಪೋಲಿಸರಾದ ಸಿದ್ರಾಮ ಹಸಾರೆಯವರು ಕಾಲೇಜು ವಿದ್ಯಾರ್ಥಿಗಳನ್ನು ಆಯಾ ಕಾಲೇಜಿನಲ್ಲಿ ಒಗ್ಗೂಡಿಸಿ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಆಚರಣೆ ಯಶಸ್ವಿಗೊಳಿಸಲು ಸಹಕರಿಸಿದರು.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ


