Belagavi

ಭಾರತೀಯ ವಾಲಿಬಾಲ್ ತಂಡದ ಸಹಾಯಕ ತರಬೇತುದಾರರಾಗಿ ಬೆಳಗಾವಿಯ ನಾಮದೇವ್ ಮಿರಜಕರ್ ಆಯ್ಕೆ!

Share

ಚೀನಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಎವಿಸಿ ಬಾಯ್ಸ್ ಯು-18 ವಾಲಿಬಾಲ್ ಚಾಂಪಿಯನ್‌ಶಿಪ್‌ಗೆ ಬೆಳಗಾವಿಯ ಹಿರಿಯ ವಾಲಿಬಾಲ್ ತರಬೇತುದಾರ ನಾಮದೇವ್ ಮಿರಜಕರ್ ಅವರು ಭಾರತ ತಂಡದ ಸಹಾಯಕ ತರಬೇತುದಾರರಾಗಿ ಆಯ್ಕೆಯಾಗುವ ಮೂಲಕ ಗಡಿಭಾಗಕ್ಕೆ ಹೆಮ್ಮೆ ತಂದಿದ್ದಾರೆ.
ಚೀನಾದ ಹೈಕೌನಲ್ಲಿ ಜುಲೈ 12 ರಿಂದ 18 ರವರೆಗೆ ಆಯೋಜಿಸಲಾಗಿರುವ ಎವಿಸಿ ಬಾಯ್ಸ್ ಯು-18 ವಾಲಿಬಾಲ್ ಚಾಂಪಿಯನ್‌ಶಿಪ್-2026 ಕ್ಕಾಗಿ ಭಾರತೀಯ ವಾಲಿಬಾಲ್ ತಂಡದ ಸಹಾಯಕ ತರಬೇತುದಾರರಾಗಿ ಬೆಳಗಾವಿಯ ನಾಮದೇವ್ ಮಿರಜಕರ್ ಆಯ್ಕೆಯಾಗಿದ್ದಾರೆ. ಬೆಳಗಾವಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ವಾಲಿಬಾಲ್ ತರಬೇತುದಾರರಾಗಿ ಹಾಗೂ ಕ್ರೀಡಾ ಭಾರತಿ ಬೆಳಗಾವಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಮಿರಜಕರ್ ಅವರನ್ನು ಒಡಿಶಾದ ಭುವನೇಶ್ವರದಲ್ಲಿರುವ ಕೆಐಐಟಿವಿಶ್ವವಿದ್ಯಾಲಯದ ತರಬೇತಿ ಶಿಬಿರದಲ್ಲಿ ಅಧಿಕೃತವಾಗಿ ಆಯ್ಕೆ ಮಾಡಲಾಯಿತು.

ಈ ಮಹತ್ವದ ರಾಷ್ಟ್ರೀಯ ಶಿಬಿರವು ಜೂನ್ 26 ರಿಂದ ಜುಲೈ 10 ರವರೆಗೆ ನಡೆಯಲಿದ್ದು, ಪ್ರಮುಖರಾದ ಟಾಮ್ ಜೋಸೆಫ್, ನವನೀತ್ ಕಟಾರಿಯಾ, ಜಗದೀಶ್ ಸಿಂಗ್, ನಿರ್ಮಲ್ ತೋವರ್, ಚೇಪೂರ್ ಮತ್ತು ಶ್ರೀದೇವಿ ಅವರನ್ನೊಳಗೊಂಡ ಉನ್ನತ ಮಟ್ಟದ ಆಯ್ಕೆ ಸಮಿತಿಯು ಈ ಜವಾಬ್ದಾರಿಯನ್ನು ಹಸ್ತಾಂತರಿಸಿದೆ. ಭಾರತೀಯ ತಂಡದ ತರಬೇತುದಾರರ ಮಂಡಳಿಯಲ್ಲಿ ಮುಖ್ಯ ತರಬೇತುದಾರರಾಗಿ ಟಾಮ್ ಜೋಸೆಫ್, ಸಹಾಯಕ ತರಬೇತುದಾರರಾಗಿ ನಾಮದೇವ್ ಮಿರಜಕರ್, ಫಿಟ್ನೆಸ್ ತರಬೇತುದಾರರಾಗಿ ರಮೇಶ್ ತಾರೀಖ್ ಮತ್ತು ಫಿಸಿಯೋಥೆರಪಿಸ್ಟ್ ಆಗಿ ಡಾ. ಆರ್. ಅನು ಸಿಂಗ್ ಕಾರ್ಯನಿರ್ವಹಿಸಲಿದ್ದು, ಮಿರಜಕರ್ ಅವರ ಈ ಅಂತಾರಾಷ್ಟ್ರೀಯ ಮಟ್ಟದ ಯಶಸ್ಸಿಗೆ ಕ್ರೀಡಾ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Tags:

error: Content is protected !!