ಜಿಂಕೆ ಬೇಟೆಯಾಡಿ ಅದರ ಮಾಂಸವನ್ನು ಬೇಯಿಸಿ ಅಡುಗೆ ಮಾಡುತ್ತಿದ್ದ ಮನೆಯೊಂದರ ಮೇಲೆ ಖಚಿತ ಮಾಹಿತಿ ಮೇರೆಗೆ, ಧಾರವಾಡ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಧಾರವಾಡ ತಾಲೂಕಿನ ಲಾಳಗಟ್ಟಿ ಗ್ರಾಮದ ಮನೆಯಲ್ಲಿ ಜಿಂಕೆ ಮೌಂಸ ಬೇಯಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದ್ದು, ಲಾಳಗಟ್ಟಿ ಗ್ರಾಮದ ಫಕ್ಕೀರಪ್ಪ, ಮಡಿವಾಳಪ್ಪ ಮ್ಯಾಗೇರಿ ಹಾಗೂ ಧಾರವಾಡ ಹೊಸಯಲ್ಲಾಪುರದ ವಾಸುದೇವ ನಾಯಕ್ ಎಂಬುವವರೇ ಬಂಧಿತ ಆರೋಪಿಗಳು. ಜಿಂಕೆ ಬೇಟೆಯಾಡಿ ಅದರ ತಲೆ ಹಾಗೂ ಮಾಂಸವನ್ನು ಬೇಯಿಸಿ ಅಡುಗೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಹಾಗೂ ಸಿಬ್ಬಂದಿ ಲಾಳಗಟ್ಟಿ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಜಿಂಕೆ ಮಾಂಸ ಬೇಯಿಸುತ್ತಿದುದು ಗೊತ್ತಾಗಿದೆ. ಆ ಮಾಂಸದ ಸಮೇತ ಅರಣ್ಯಾಧಿಕಾರಿಗಳು ಆ ಮನೆಯಲ್ಲಿದ್ದ ನಾಡ ಬಂದೂಕು, ಸಿಡಿಮದ್ದು, ಪಟಾಕಿ, ಸೀಸ ಹಾಗೂ ಗನ್ ಪೌಡರ್ ಕೂಡ ಜಪ್ತಿ ಮಾಡಿದ್ದಾರೆ. ಅಲ್ಲದೇ ಜಿಂಕೆ ಮಾಂಸ ಬೇಯಿಸಿ ಅಡುಗೆ ಮಾಡುತ್ತಿದ್ದ ಆ ಇಬ್ಬರು ಆರೋಪಿತರು ಸೇರಿದಂತೆ ಒಂದು ಬೈಕ್ನ್ನೂ ವಶಕ್ಕೆ ಪಡೆದಿದಾರೆ.
