ಆಣೆ-ಪ್ರಮಾಣ ಹಾಗೂ ಪಕ್ಷದ ಒಳಗಿನ ಶಿಸ್ತಿನ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ದಾಳಿ ತಾರಕಕ್ಕೇರಿದೆ. ಇಂದು ಬೆಂಗಳೂರಿನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮಂಜುನಾಥ ಸ್ವಾಮಿ ಹೆಸರಿನಲ್ಲಿ ಆಣೆ ಮಾಡಲು ಹೊರಟಿರುವ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಮನ ಹೆಸರಲ್ಲಿ ಲೂಟಿ ಮಾಡಿದವರು ಮಂಜುನಾಥನ ಮುಂದೆ ನಿಜ ಹೇಳ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಲ್ಲಿಕಾರ್ಜುನ ಖರ್ಗೆ ನಮ್ಮ ಪಕ್ಷದ ಹಿರಿಯರು ಪಕ್ಷವನ್ನು ಶಿಸ್ತಿನ ಹಾದಿಯಲ್ಲಿ ನಡೆಸುವುದು, ಶಿಸ್ತು ಹೇಳಿ ಕೊಡುವುದು ತಪ್ಪಾ? ಬಿಜೆಪಿಯಲ್ಲಿ ಶಿಸ್ತು ಇಲ್ಲ. ಆದ್ದರಿಂದಲೇ ಇಂದು ಅಡ್ಡ ಮತದಾನ ಮಾಡಿ, ಮಂಜುನಾಥ ಸ್ವಾಮಿಯ ಆಣೆ ಪ್ರಮಾಣಕ್ಕೆ ಹೊರಟಿದ್ದಾರೆ. ಅವರಿಗೆ ಅವರ ಪಾರ್ಟಿಯನ್ನು ನೋಡಿಕೊಳ್ಳಲಿ. ಸತ್ಯ ಶೋಧನಾ ಸಮಿತಿಯ ವರದಿಯನ್ನು ನೀಡಲಿ. ಹಿರಿಯ ಅನುಭವಿ ನಾಯಕ ಖರ್ಗೆ ಅವರು ಪಕ್ಷದ ಶಿಸ್ತಿಗಾಗಿ ಯುವಕರ ಕಿವಿಯನ್ನು ಹಿಂಡಬೇಕು. ರಾಮನ ಹೆಸರಲ್ಲಿ ಲೂಟಿ ಮಾಡಿದವರು ಮಂಜುನಾಥನ ಹೆಸರಿನಲ್ಲಿ ನಿಜ ಹೇಳುತ್ತಾರಾ? ಎಂದು ಪ್ರಶ್ನಿಸಿದರು.
