Belagavi

ಬೆಳಗಾವಿಯಲ್ಲಿ ನಾಳೆಯಿಂದ ಮೂರು ದಿನಗಳ ‘ಸೆಕೆಂಡ್ ವಿಷನ್ ಕರ್ನಾಟಕ-2026’ ಬೃಹತ್ ಪ್ರದರ್ಶನ: ವನೀಶ್ ಗುಪ್ತಾ

Share

ದೆಹಲಿ ಮೂಲದ ‘ಪ್ರಯಾಸ್’ ಸಂಸ್ಥೆಯು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಾಳೆಯಿಂದ ಮೂರು ದಿನಗಳ ‘ಸೆಕೆಂಡ್ ವಿಷನ್ ಕರ್ನಾಟಕ-2026’ ಬೃಹತ್ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಯಾಸ್’ನ ಪ್ರಮುಖರಾದ ವನೀಶ್ ಗುಪ್ತಾ ಅವರು ಹೇಳಿದರು.

ಇಂದು ಬೆಳಗಾವಿಯಲ್ಲಿ ಕರೆಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಸಂಸದ ಜಗದೀಶ್ ಶೆಟ್ಟರ್ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ದೆಹಲಿ ಮೂಲದ ‘ಪ್ರಯಾಸ್’ ಎಕ್ಸಿಬಿಷನ್ ಹಮ್ಮಿಕೊಂಡಿರುವ ‘ಸೆಕೆಂಡ್ ವಿಷನ್ ಕರ್ನಾಟಕ 2026’ ಎಂಬ ಮೂರು ದಿನಗಳ ಸಾರ್ವಜನಿಕ ಜಾಗೃತಿ ಪ್ರದರ್ಶನವು ಜೂನ್ 23 ರಿಂದ ಜೂನ್ 25ರವರೆಗೆ ನೆಹರು ನಗರದ ಕೆಎಲ್‌ಇ ಸಂಸ್ಥೆಯ ಕನ್ವೆನ್ಷನ್ ಸೆಂಟರ್‌ನ ‘ಡಾ. ಬಿ. ಎಸ್. ಜೀರಗೆ ಆಡಿಟೋರಿಯಂ’ನಲ್ಲಿ ನಡೆಯಲಿದೆ ಸತತ ಎರಡನೇ ವರ್ಷ ನಡೆಯುತ್ತಿರುವ ಈ ಪ್ರದರ್ಶನಕ್ಕೆ ಬೆಳಗಾವಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಪ್ರಯೋಜನಗಳನ್ನು ಪಡೆಯುವಂತೆ ಸಂಸದ ಜಗದೀಶ ಶೆಟ್ಟರ್ ಅವರು ಇದೇ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು. ಜೂನ್ 23, 24 ಮತ್ತು 25 ರಂದು ಬೆಳಿಗ್ಗೆ 10:00 ರಿಂದ ಸಂಜೆ 5:30 ರವರೆಗೆ ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿ ಪ್ರವೇಶವಿರಲಿದ್ದು, ಕೇಂದ್ರ ಸರ್ಕಾರದ ಸಚಿವಾಲಯಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ರಾಜ್ಯ ಸರ್ಕಾರದ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ಮತ್ತು ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನೇರವಾಗಿ ವ್ಯವಹರಿಸಲು ನಾಗರಿಕರಿಗೆ ಒಂದು ಅನನ್ಯ ಅವಕಾಶವನ್ನು ಇದು ಒದಗಿಸಲಿದೆ ಎಂದರು.

ಇನ್ನು ರಕ್ಷಣೆ, ಕೃಷಿ, ಹಣಕಾಸು, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರಗಳು, ಗ್ರಾಮೀಣಾಭಿವೃದ್ಧಿ, MSME, ಮೂಲಸೌಕರ್ಯ, ಪರಿಸರ ಹಾಗೂ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ತಾಂತ್ರಿಕ ನಾವೀನ್ಯತೆಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವುದು ಈ ಪ್ರದರ್ಶನದ ಪ್ರಮುಖ ಉದ್ದೇಶವಾಗಿದೆ. ಈ ವರ್ಷದ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿ ಜೂನ್ 24 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ‘ಫ್ಯೂಚರ್ ಆಫ್ ಬೆಳಗಾವಿ@2047’ ಎಂಬ ವಿಶೇಷ ಮೆಗಾ-ಚರ್ಚೆಯನ್ನು ಆಯೋಜಿಸಲಾಗಿದೆ. ಸಂಸದ ಜಗದೀಶ್ ಶೆಟ್ಟರ್ ಅವರ ಬೆಳಗಾವಿ ಅಭಿವೃದ್ಧಿ ಮಾರ್ಗಸೂಚಿಯನ್ನು ಕಾರ್ಯಗತಗೊಳಿಸಲು ಆಯೋಜಿಸಲಾದ ಈ ಮೆಗಾ-ಚರ್ಚೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ನಗರದ ಇತರೆ ವಿಶೇಷ ಆಹ್ವಾನಿತರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್, ದೀನದಯಾಳ್ ಪೋರ್ಟ್ ಅಥಾರಿಟಿ, ಯೂನಿಯನ್ ಬ್ಯಾಂಕ್, ಎಲ್‌ಐಸಿ, ಎನ್‌ಐಸಿ ಸೇರಿದಂತೆ ಇಸ್ರೋ, ಸಿಎಸ್‌ಐಆರ್, ಐಸಿಎಆರ್, ಎನ್‌ಐಟಿಕೆ, ಐಸಿಎಂಆರ್ ನಂತಹ ದೇಶದ ಪ್ರತಿಷ್ಠಿತ ಸಂಸ್ಥೆಗಳು ಸಹಕರಿಸುತ್ತಿವೆ ಎಂದು ನಾಗರಾಜ್ ಪಾಟೀಲ್ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಜಗದೀಶ್ ಶೆಟ್ಟರ್, ಮಹಾಪೌರರಾದ ಪ್ರೀತಿ ಕಾಮಕರ್, ಉಪಮಹಾಪೌರರಾದ ಹಣುಮಂತ ಕೊಂಗಾಲಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಶಾಸಕ ಅನೀಲ್ ಬೆನಕೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!