Khanapur

ಖಾನಾಪೂರ: ಎಮ್.ಇ.ಎಸ್. ಕನ್ನಡ ವಿರೋಧಿ ನೀತಿ ಖಂಡಿಸಿ ಕರವೇಯಿಂದ ತಹಶೀಲ್ದಾರರಿಗೆ ಮನವಿ!

Share

ಜೂನ್ 22ರಂದು ಮಹಾರಾಷ್ಟ್ರ ಏಕೀಕರಣ ಸಮಿತಿಯು ಆಯೋಜಿಸಿರುವ ಕಡ್ಡಾಯ ಕನ್ನಡ ವಿರೋಧಿ ಪ್ರತಿಭಟನೆಗೆ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಖಾನಾಪೂರದಲ್ಲಿ ಕರವೇ ವತಿಯಿಂದ ತಹಶೀಲ್ದಾರರಿಗೆ ಮಹತ್ವದ ಮನವಿ ಪತ್ರ ಸಲ್ಲಿಸಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಖಾನಾಪೂರ ತಾಲೂಕಾ ಘಟಕದ ವತಿಯಿಂದ ತಹಶೀಲ್ದಾರರಿಗೆ ಭೇಟಿ ನೀಡಿ ಈ ಮನವಿ ಸಲ್ಲಿಸಲಾಯಿತು. ಜೂನ್ 22ರಂದು ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಹಮ್ಮಿಕೊಂಡಿರುವ ಕಡ್ಡಾಯ ಕನ್ನಡ ವಿರೋಧಿ ಪ್ರತಿಭಟನೆಯು ಗಡಿಭಾಗದ ಶಾಂತತೆಯನ್ನು ಕದಡುವ ಪ್ರಯತ್ನವಾಗಿದೆ, ಹೀಗಾಗಿ ಈ ಕೃತ್ಯಕ್ಕೆ ಯಾವುದೇ ಕಾರಣಕ್ಕೂ ಆಡಳಿತ ಮಂಡಳಿ ಅನುಮತಿ ನೀಡಬಾರದು ಎಂದು ಒತ್ತಾಯಿಸಲಾಯಿತು. ಕರವೇ ತಾಲೂಕಾ ಘಟಕದ ಅಧ್ಯಕ್ಷ ವಿಠ್ಠಲ ಹಿಂಡಲಕರ ಅವರ ನೇತೃತ್ವದಲ್ಲಿ ನಡೆದ ಈ ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿಷ್ಟಪ್ಪ ಬನೋಶಿ, ಶ್ರಿಕಾಂತ ಪಾಟೀಲ್, ತಮ್ಮನ್ನ ಗವಳಿನಾಳಿ, ರಾಮಚಂದ್ರ ಪಾಟೀಲ್, ಸಿದ್ದು ಕೋಲಕಾರ ಮಡಿವಾಳಿ, ಭೂಪನ್ನಿ ರಾಮನಿಂಗ ಪಾಟೀಲ್ ಹಾಗೂ ಭೀಮಸೇನ್ ಅಗಸರ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೆರೆದಿದ್ದ ನಾಯಕರು ಎಮ್.ಇ.ಎಸ್. ಸಂಘಟನೆಯ ನಿರಂತರ ಕನ್ನಡ ವಿರೋಧಿ ನೀತಿ ಹಾಗೂ ಪ್ರಚೋದನಾತ್ಮಕ ನಡೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Tags:

error: Content is protected !!