ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ರಾಯಾಪೂರಗಲ್ಲಿಯ ನಿವಾಸಿ ಗುಡ್ಡವ್ವ ಕಲ್ಲಪ್ಪ ಬೋಟೆಕರ ಇಂದು ನಿಧನರಾದರು.
ನಂದಗಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಶೀಲಾ ಬೋಟೆಕರ ಅವರ ಅತ್ತೆ ಮತ್ತು ನಂದಗಡ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ್ ಬೋಟೇಕರ ಅವರ ಮಾತೋಶ್ರೀ ಆಗಿದ್ದರು. ಮೃತರ ಅಂತ್ಯಕ್ರಿಯೆ ಸಂಜೆ 4.30 ಘಂಟೆಗೆ ನಡೆಯಲಿದೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

