ಬೆಳಗಾವಿಯ ಪ್ರಸಿದ್ಧ ಕ್ಯಾಂಪ್ ಪ್ರದೇಶದ ಸೇಂಟ್ ಅಂಥೋನಿ ಚರ್ಚ್‌ನಲ್ಲಿ ಭಕ್ತರ ಪ್ರಾರ್ಥನೆ ಮತ್ತು ಧಾನ್ಯಕ್ಕಾಗಿ ನೂತನವಾಗಿ ನಿರ್ಮಿಸಲಾದ ಪವಿತ್ರ ಆರಾಧನಾ ಕೇಂದ್ರವನ್ನು ಉದ್ಘಾಟಿಸಲಾಗಿದೆ. ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಧರ್ಮಗುರುಗಳ ಸಮ್ಮುಖದಲ್ಲಿ ಈ ಭವ್ಯ ಕಾರ್ಯಕ್ರಮ ನೆರವೇರಿತು.

ಬೆಳಗಾವಿಯ ಕ್ಯಾಂಪ್ ಪ್ರದೇಶದ ಐತಿಹಾಸಿಕ ಸೇಂಟ್ ಅಂಥೋನಿ ಚರ್ಚ್ ಆವರಣದಲ್ಲಿ, ಪ್ರಾರ್ಥನೆಗೆ ಬರುವ ಭಕ್ತಾದಿಗಳ ದಿವ್ಯ ಧಾನ್ಯಕ್ಕಾಗಿ ನೂತನವಾಗಿ ನಿರ್ಮಿಸಲಾದ ಪವಿತ್ರ ಆರಾಧನಾ ಕೇಂದ್ರವನ್ನು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು. ಕ್ರೈಸ್ತ ಬಾಂಧವರ ಬಹುದಿನಗಳ ಬೇಡಿಕೆಯಾಗಿದ್ದ ಈ ಸುಸಜ್ಜಿತ ಆರಾಧನಾ ಮಂದಿರವು ಇನ್ನುಮುಂದೆ ಭಕ್ತರಿಗೆ ಶಾಂತಿ ಮತ್ತು ಆಧ್ಯಾತ್ಮಿಕ ಚಿಂತನೆಗೆ ಸೂಕ್ತ ಧಾಮವಾಗಲಿದೆ.
ಈ ವೇಳೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ಬಿಶಪ್ ಡೇರಿಕ್ ಫರ್ನಾಂಡೀಸ್ ಅವರು, “ಆರಾಧನಾ ಮಂದಿರದ ಮುಖ್ಯ ಉದ್ದೇಶವೇ ಭಕ್ತರು ದೇವರೊಂದಿಗೆ ಮೌನವಾಗಿ ಸಂವಹನ ನಡೆಸುವುದು” ಎಂದು ಮಾರ್ಗದರ್ಶನ ನೀಡಿದರು.

ಧರ್ಮಗುರು ಬಿಶಪ್ ಡೇರಿಕ್ ಫರ್ನಾಂಡೀಸ್ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾರೀಶ್ ಪ್ರೇಸ್ಟ್ ವಿಜಯ್ ಮಂಡಿಥ್, ಫಾದರ್ ಫಿಲೀಪ್ ಕುಟ್ಟಿ, ಫಾದರ್ ಜಾಯ್ ಹಾಗೂ ಫಾದರ್ ಪ್ರಮೋದ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
