Bagalkot

ಆನ್ ಲೈನ್ ಧೋಖಾ::ಲಕ್ಷ ಲಕ್ಷ ಹಣ ಪೀಕಿದ ಕಿರಾತಕರು

Share

ಇತ್ತಿಚೀಗೆ ಆನ್ ಲೈನ್ ಧೋಖಾ ಪ್ರಕರಣಗಳು ಹೆಚ್ಚುತ್ತಿವೆ.ಅದೆಷ್ಟೋ ಜನ ಅಲ್ಪ ಸಮಯದಲ್ಲಿ ದ್ವಿಗುಣದ ಆಮಿಷ್ಯ ಒಡ್ಡಿ ವಂಚಿಸುತ್ತಿದ್ರು.ಆದ್ರೆ ಇದೀಗ ಡಿಜಿಟಲ್‌ ಮೂಲಕ ಹಣ ವಂಚಿಸುವವರ ಜಾಲ ಸಕ್ರಿಯವಾಗಿದ್ದು,ನಿವೃತ್ತಿ ಅಂಚಿನಲ್ಲಿರೋ ಸರ್ಕಾರಿ ನೌಕರನಿಗೆ ಬರೊಬ್ಬರಿ 83 ಲಕ್ಷ ರೂ ಪಂಗನಾಮ ಹಾಕಿದ್ದಾರೆ.ಡಿಜಿಟಲ್ ಧೋಖಾ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ….

ಒಂದೆಡೆ ಆನ್ ಲೈನ್ ಮೂಲಕ ಹಣ ವಂಚಿಸುವ ಜಾಲದ ವಿರುದ್ಧ ಜಾಗೃತಿ ಮೂಡಿಸುತ್ತಿರೋ ಪೊಲೀಸರು. ಮತ್ತೊಂದೆಡೆ ನಿವೃತ್ತಿ ಅಂಚಿನಲ್ಲಿರೋ ಸರ್ಕಾರಿ ನೌಕರನೊಬ್ಬ ಆನ್ ಲೈನ್ ವಂಚಕರ ಜಾಲಕ್ಕೆ ಸಿಲುಕಿ ಲಕ್ಷ ಲಕ್ಷ ಹಣ ಕಳೆದುಕೊಂಡು ಸೈಬರ್ ಕ್ರೈಂ ಪೊಲೀಸರಿಗೆ ದೂರು.ಇಂತಹ ಘಟನೆ ನಡೆದಿದ್ದು ಬಾಗಲಕೋಟೆ ಸೈಬರ್ ಕ್ರೈಮಂ ಪೊಲೀಸ್ ಠಾಣೆಯಲ್ಲಿ.ಹೌದು ಬಾಗಲಕೋಟೆ ಜಿಲ್ಲೆಯ ಸರ್ಕಾರಿ ನೌಕರನೊಬ್ಬನಿಗೆ ಮುಂಬೈ ನಕಲಿ ಪೊಲೀಸರ ಹೆಸರಲ್ಲಿ ಕಳೆದ ಫೆಬ್ರುವರಿ 22ರಂದು ನಿವೃತ್ತಿ ಅಂಚಿನಲ್ಲಿರೋ ನೌಕರನಿಗೆ ಕರೆ ಬಂದಿದೆ.ನಿಮ್ಮ ಆದಾರ ವಿಳಾಸದ ಮೇಲೆ ಮೂರು ಸಿಮ್ ಗಳಿವೆ.ಅವುಗಳಿಂದ ಅಶ್ಲಿಲ ಮೆಸೇಜ್ ಬಗ್ಗೆ ದೂರು ದಾಖಲಾಗಿದೆ.ಜೊತೆ ಹೆಚ್ಚಿಣ ಹಣ ವರ್ಗಾವಣೆ ಆಗಿದೆ.ಹೀಗಾಗಿ ಪ್ರಕರಣ ಸಿಬಿಐಗೆ ವರ್ಗಾವಣೆ ಆಗಿದೆ ಎಂದು ಬೇದರಿಕೆ ಹಾಕಿದ್ದಾರೆ.ಅಷ್ಟೆ ಅಲ್ಲ ವಿಡಿಯೋ ಕಾಲ್ ಮೂಲಕ ಅಧಿಕಾರಿಗಳು ವಿಚಾರಣೆ ಮಾಡ್ತಾರೆ ಎಂದು ಹೇಳಿ,ನಕಲಿ ಕೊರ್ಟ್,ಸಿಬಿಐ ಕಚೇರಿ ಮೂಲಕ ವಿಚಾರಣೆ ಮಾಡಿದೆ ಪ್ರಾಡ್ ಗ್ಯಾಂಗ್.ಇದ್ರಿಂದ ಹೆದರಿದ ಸರ್ಕಾರಿ ನೌಕರ ಪ್ರಕರಣದಿಂದ ಪಾರಾಗಲು ಖಧೀಮರು ಕೆಳಿದಷ್ಟು ಹಂತ ಹಂತವಾಗಿ ಒಟ್ಟು 83 ಲಕ್ಷ ಹಣ ಹಾಕಿದ್ದಾನೆ.ಬಳಿಕ ಅವ್ರು ಅಸಲಿ ಅಲ್ಲಾ,ಅದು ನಕಲಿ ಆನ್ ಲೈನ್ ದೋಖಾ ಎಂದು ಅರಿತ ನೌಕರ ಬಾಗಲಕೋಟೆ ಸಿಇಎನ್ ಠಾಣೆಗೆ ದೂರು ನೀಡಿದ್ದಾನೆ…

ಇನ್ನು ಡಿಜಿಟಲ್ ಧೋಖಾದಿಂದ ಹೆದರಿದ ನೌಕರ,ಪ್ರಕರಣದಿಂದ ಪಾರಾಗಲು ಸಾಲ ಸೂಲ ಮಾಡಿ ಡಿಜಿಟಲ್ ಖಧೀಮರು ಹೇಳಿದಂತೆ ಹಂತ ಹಂತವಾಗಿ ಬರೊಬ್ಬರಿ 2 ತಿಂಗಳಲ್ಲಿ 83 ಲಕ್ಷ ಹಣ ಪೀಕಿದ್ದಾರೆ.ಹಣ ಕಳೆದುಕೊಂಡ ಒಂದು ತಿಂಗಳ ಬಳಿಕ ನಾವು ಮೊಸಹೋಗಿದ್ದೇವೆ ಎಂದು ಕಂಗಾಲಾದ ನೌಕರನ ಕುಟುಂಬ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.ದೂರಿನ ಅನ್ವಯ ಬಾಗಲಕೋಟೆ ಎಸ್ ಪಿ ಸಿದ್ದಾರ್ಥ್ ಗೊಯಲ್ ನೇತೃತ್ವದಲ್ಲಿ ಸಿಇಎನ್ ಪೊಲೀಸರ ತಂಡ ರಚನೆ ಮಾಡಿ ಪ್ರಕರಣದ ತನಿಖೆ ಶುರುಮಾಡಿದೆ.ಡಿಜಿಟಲ್ ವಂಚನೆಗೊಳಗಾದ ವ್ಯಕ್ತಿ ಡಿಜಿಟಲ್ ಖಧಿಮರ ಚಟುವಟಿಕೆಯ ಪಿನ್ ಟು ಪಿನ್ ಮಾಹಿತಿ ನೀಡಿದ್ದು,ಪ್ರಕರಣದ ಬಗ್ಗೆ ಬಾಗಲಕೋಟೆ ಎಸ್ ಪಿ ಮಾತನಾಡಿದ್ದು ಹೀಗೆ…

ಒಟ್ಟಿನಲ್ಲಿ ಜಾಗತಿಕವಾಗಿ ಆನ್ ಲೈನ್ ಧೋಖಾ ಹೆಚ್ಚಿದ್ದು,ಸರ್ಕಾರಿ ನೌಕರರೇ ಡಿಜಿಟಲ್ ಖಧೀಮರ ಖೆಡ್ಡಾಗೆ ಬಿಳ್ತಿರೋದು ದುರಂತ.ಬಾಗಲಕೋಟೆ ಜಿಲ್ಲಾ ಪೊಲೀಸರು ಡಿಜಿಟಲ್ ಧೋಖಾ ಕುರಿತು ಜಾಗೃತಿ ಮೂಡಿಸುತ್ತಿದ್ರೂ ಆನ್ ಲೈನ್ ಖಧೀಮರ ಬೆದರಿಕೆ ಕರೆಗಳಿಗೆ ಭಯಭೀತಗೊಂಡು ಹಣ ಕಳೆದುಕೊಳ್ತಿರೋದು ದುರಂತವೇ ಸರಿ..

Tags:

error: Content is protected !!