DEATH

ಹೈಕೋರ್ಟ್ ವ್ಯಾಜ್ಯ ಮಧ್ಯೆಯೇ ಜಮೀನು ಹೆಸರು ಕಡಿತ; ಮನನೊಂದು ಹೃದಯಾಘಾತದಿಂದ ರೈತನ ನಿಧನ??? ರೈತ ಕುಟುಂಬದ ಆಕ್ರೋಶ

Share

ಬೆಳಗಾವಿಯ ಕಣಬರ್ಗಿಯ ಸಿದ್ಧೇಶ್ವರ ನಗರದಲ್ಲಿ ಜಮೀನು ವಿವಾದ ಮತ್ತೆ ಚರ್ಚೆಗೆ ಬಂದಿದೆ.ಹೈಕೋರ್‌್ ನಲ್ಲಿ ವ್ಯಾಜ್ಯ ನಡೆಯುತ್ತಿದ್ದರೂ ಜಮೀನು ದಾಖಲೆಗಳಲ್ಲಿ ಹೆಸರು ಕಡಿತಗೊಳಿಸಿದ ಹಿನ್ನೆಲೆ ಮನನೊಂದು ಹೃದಯಾಘಾತದಿಂದ ರೈತನೋರ್ವ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ.

ಬೆಳಗಾವಿಯ ಕಣಬರ್ಗಿಯ ಸಿದ್ಧೇಶ್ವರ ನಗರದ ರೈತ ಸಿದ್ಧಪ್ಪ ಲಕ್ಷ್ಮಣ್ ಮಾಲಾಯಿ ಅವರ ಜಮೀನು ಸಂಖ್ಯೆ 512/3/2ಕ್ಕೆ ಸಂಬಂಧಿಸಿದ ವ್ಯಾಜ್ಯವು 2008ರಿಂದ 2024ರವರೆಗೆ ನ್ಯಾಯಾಲಯದಲ್ಲಿ ಜಾರಿಯಲ್ಲಿತ್ತು ಎಂದು ತಿಳಿದುಬಂದಿದೆ. ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದ್ದ ಸಂದರ್ಭದಲ್ಲೇ 2020ರಲ್ಲಿ 1 ಎಕರೆ 12 ಗುಂಟೆ ಜಮೀನಿನ ದಾಖಲೆಗಳಿಂದ ಸಿದ್ಧಪ್ಪ ಮಾಲಾಯಿ ಅವರ ಹೆಸರನ್ನು ಕಡಿತಗೊಳಿಸಲಾಗಿದೆ ಎಂಬ ಆರೋಪ ಕುಟುಂಬದವರು ಮಾಡಿದ್ದಾರೆ. ಅಲ್ಲದೇ ಉಮೇಶ್ ಹಲಗೇಕರ್ ಅವರ ಹೆಸರನ್ನೂ 20 ಗುಂಟೆ ಜಮೀನಿನಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಈ ಬೆಳವಣಿಗೆಗಳಿಂದ ಮಾನಸಿಕವಾಗಿ ನೊಂದಿದ್ದ ಸಿದ್ಧಪ್ಪ ಮಾಲಾಯಿ ಅವರು ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬುಡಾ ಆಯುಕ್ತರ ಗಮನಕ್ಕೂ ವಿಷಯ ತರಲಾಗಿದೆ. ರೈತರ ಸಮ್ಮತಿ ಮತ್ತು ಸಹಿ ಇಲ್ಲದೆ ಜಮೀನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ರೈತ ಸಂಘಟನೆಗಳು ಆರೋಪಿಸಿದ್ದು, ಪ್ರಕರಣದ ಸಮಗ್ರ ತನಿಖೆಗೆ ಬಬನ್ ಮಾಲಾಯಿ ಆಗ್ರಹಿಸಿದ್ದಾರೆ.

Tags:

error: Content is protected !!