ಬೆಳಗಾವಿ ಜಿಲ್ಲೆಯ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊರಬ ಗ್ರಾಮದಲ್ಲಿ ಭರ್ಜರಿ ಕಾರ್ಯಾಚರಣೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬೃಹತ್ ಪ್ರಮಾಣದ ಕಳ್ಳಭಟ್ಟಿ ಮತ್ತು ಕಚ್ಚಾ ಪದಾರ್ಥಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

• ಕುಡಚಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 132/2026 ಕಲಂ: 32, 34, 38(A) ಕರ್ನಾಟಕ ಅಬಕಾರಿ ಕಾಯ್ದೆ ಮತ್ತು 123 BNS 2023 :

ಮುಂಜಾನೆ ಮೊರಬ ಗ್ರಾಮದ ಆರೋಪಿತರ ಮನೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಸಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿಟ್ಟುಕೊಂಡಿರುತ್ತಾರೆ ಅಂತಾ ಮಾಹಿತಿ ಬಂದಿದ್ದು, ಆ ಪುಕಾರ ಮಾನ್ಯ ಶ್ರೀ. ಕೆ.ರಾಮರಾಜನ್ ಐಪಿಎಸ್ ಎಸ್.ಪಿ ಸಾಹೇಬರು ಬೆಳಗಾವಿ , ಮಾನ್ಯ ಶ್ರೀ. ಆರ್.ಬಿ ಬಸರಗಿ ಹೆಚ್ಚುವರಿ ಎಸ್.ಪಿ ಸಾಹೇಬರು ಬೆಳಗಾವಿ, ಮಾನ್ಯ ಶ್ರೀ. ಪ್ರಶಾಂತ ಮುನ್ನೋಳ್ಳಿ, ಡಿ.ಎಸ್.ಪಿ ಸಾಹೇಬರು ಅಥಣಿ ಮತ್ತು ಶ್ರೀ, ರತನ್‌ಕುಮಾರ ಜೀರಗಾಳ ಸಿಪಿಐ ಹಾರೂಗೇರಿ ರವರ ಮಾರ್ಗದರ್ಶನಲ್ಲಿ ಪ್ರೀತಮ್ ನಾಯ್ಕ ಪಿ.ಎಸ್.ಐ ಎಲ್ & ಓ ಕುಡಚಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರಾದ ಕೆ.ಆರ್. ಸಾಳುಂಕೆ ಎ.ಎಸ್.ಐ, ಪಿ.ಎಲ್. ಕವಟಿಕೊಪ್ಪ, ಎಚ್.ಎಸ್ ಗುಡ್ಡದ, ಪಿ.ಎಸ್ ಕೋಡ್, ಎ.ಎ. ಶಾಂಡಗೆ, ಎ.ಎಸ್. ಪಾಟೀಲ ಮತ್ತು ಮಹಿಳಾ ಸಿಬ್ಬಂದಿಯಾದ ಆರ್.ಎಸ್. ಸನದಿ ಎಲ್ಲರೂ ಕುಡಚಿ ಪೊಲೀಸ್ ಠಾಣೆ ಕೂಡಿ ದಾಳಿ ಮಾಡಿ ಆರೋಪಿತರ ಮನೆಯಲ್ಲಿ ಸಂಗ್ರಹಿಸಿದ ಕಳ್ಳಭಟ್ಟಿ ಸಾರಾಯಿ ತಯಾರು ಮಾಡುವ ಕೊಳೆ 1790 ಲೀಟರ್ ಮತ್ತು ಕಳ್ಳಭಟ್ಟಿ ಸಾರಾಯಿ 10 ಲೀಟರ್ ಹಾಗೂ ಕಳ್ಳಭಟ್ಟಿ ತಯಾರು ಮಾಡಲು ಉಪಯೋಗಿಸುತ್ತಿದ್ದು ಬ್ಯಾರಲ್ ಗಳನ್ನು ಜಪ್ತ ಮಾಡಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಆರೋಪಿತನಿಗೆ ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇರುತ್ತದೆ.
ಜಿಲ್ಲೆಯಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು, ರೌಡಿಸಂ ಅಥವಾ ಸಾರ್ವಜನಿಕರಿಗೆ ಭಯ ಹುಟ್ಟಿಸುವಂತಹ ಕೃತ್ಯಗಳಲ್ಲಿ ತೊಡಗಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾನ್ಯ ಪೊಲೀಸ್ ಅಧೀಕ್ಷಕರು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ
ಸಾರ್ವಜನಿಕರ ರಕ್ಷಣೆಗಾಗಿ ಪೊಲೀಸ್ ಇಲಾಖೆಯು ಇಂತಹ ಮುನ್ನೆಚ್ಚರಿಕೆ ಕಾರ್ಯಾಚರಣೆಗಳನ್ನು ನಿರಂತರವಾಗಿ ಮುಂದುವರೆಸಲಿದೆ.
