ರೈತರು ,ಕೃಷಿಕರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹುಕ್ಕೇರಿ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಅದ್ಯಕ್ಷ ಗುರಪ್ಪಾ ತಳವಾರ ಹೇಳಿದರು.
ಇತ್ತೀಚಿಗೆ ಹುಕ್ಕೇರಿ ತಾಲೂಕಾ ಪಿ ಎಲ್ ಡಿ ಬ್ಯಾಂಕ ಅದ್ಯಕ್ಷ ಚುನಾವಣೆಯಲ್ಲಿ ಅವಿರೊಧವಾಗಿ ಆಯ್ಕೆಯಾದ ಗುರಪ್ಪಾ ತಳವಾರ ನಗರದ ಕೋರ್ಟ ಸರ್ಕಲ್ ಬಳಿ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ , ಗ್ರಾಮ ಪಂಚಾಯತ ಮತ್ತು ಪಿ ಎಲ್ ಡಿ ಬ್ಯಾಂಕ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ ನಿಮಿತ್ಯ ಇಂದು ಮಾಜಿ ಸಂಸದರಾದ ರಮೇಶ ಕತ್ತಿ ಯವರ ಮಾರ್ಗದರ್ಶನದಲ್ಲಿ ಹುಕ್ಕೇರಿ ತಾಲೂಕಾ ಪಿಕಾರ್ಡ ಬ್ಯಾಂಕ ಅದ್ಯಕ್ಷನಾಗಿ ಅವಿರೋಧವಾಗಿ ಆಯ್ಕೆ ಯಾಗಿದ್ದೆನೆ ಕಾರಣ ಎಲ್ಲರಿಗೂ ಚಿರಖುಣಿಯಾಗಿದ್ದೆನೆ ಎಂದರು

ನಂತರ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ನೂತನ ಅದ್ಯಕ್ಷರಿಗೆ ಸತ್ಕರಿಸಿ ಅಭಿನಂದನೆ ಸಲ್ಲಿಸಿದರು.
ದಲಿತ ಮುಖಂಡ ಶ್ರೀಕಾಂತ ತಳವಾರ ಮಾತನಾಡಿ ಗುರಪ್ಪಾ ತಳವಾರ ಇವರು ದಲಿತ ಸಂಘರ್ಷ ಸಮಿತಿಯಲ್ಲಿ ಕಾರ್ಯನಿರ್ವಹಿಸಿ ನಂತರ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೆಯಾದ ಛಾಪು ಮೂಡಿಸಿ ಈಗ ರಮೇಶ ಕತ್ತಿಯವರ ಸಹಕಾರದಿಂದ ತಾಲೂಕಾ ಪಿ ಎಲ್ ಡಿ ಬ್ಯಾಂಕ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಅವರಿಗೆ ಸಕಲ ದಲಿತರ ಪರವಾಗಿ ಅಭಿನಂದನೆ ಸಲ್ಲಿಸುತ್ತೆನೆ ಎಂದರು

ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರಾದ ರಮೇಶ ಕೋಚರಿಕರ, ಶ್ರೀಕಾಂತ ತಳವಾರ, ಆರ್ ಪಿ ಆಯ್ ಅದ್ಯಕ್ಷ ನಾಗೇಂದ್ರ ಅವ್ವಬಾಯಿಗೋಳ, ಪಾರೇಶ ಖಾತೆದಾರ, ರವಿಂದ್ರ ಬಾಗವಾನ, ಶಿವಾನಂದ ಮಾದರ, ಕಲ್ಲಪ್ಪಾ ಕೋಳಿ, ಸದಾಶೀವ ಕರ್ಯಾಗೋಳ, ಕೆ ಜಿ ದೋಡ್ಡನಾಯ್ಕ ಸೇರಿದಂತೆ ದಲಿತ ಕಾರ್ಯಕರ್ತರು ಉಪಸ್ಥಿತರಿದ್ದರು.
