ಬೆಳಗಾವಿ ಜಿಲ್ಲೆಗೆ ಇನ್ನೂ ಒಬ್ಬರು ಸಚಿವರ ಅವಶ್ಯಕತೆ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.


ಹುಕ್ಕೇರಿ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ವಿವಿಧ ಇಲಾಖೆ ಪ್ರಗತಿ ಪರಶೀಲನಾ ಸಭೆ ಜರುಗಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ನಾನು ಕೆ ಪಿ ಸಿ ಸಿ ಅದ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು ನಿಜ ಆದರೆ ಒಬ್ಬರಿಗೆ ಒಂದೆ ಸ್ಥಾನ ದಿಂದಾಗಿ ಸಚೀವ ಸ್ಥಾನದಲ್ಲಿ ಮುಂದು ವರೆದಿದ್ದೆನೆ, ನಮ್ಮ ಹಿರಿಯರಾದ ಬಿ ಕೆ ಹರಿಪ್ರಸಾದ ರವರ ಅದ್ಯಕ್ಷತೆಯಲ್ಲಿ ನಾವು ಮುಂದುವರೆಯುತ್ತೆವೆ, ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿರುವರ ಮೇಲೆ ಪ್ರಕರಣ ಧಾಖಲಿಸಿದ್ದೆವೆ ಅದು ಮುಗಿದ ಅದ್ಯಾಯ,ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ನಾಲ್ಕು ಐದು ಜನ ಹಿರಿಯ ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಆದರೆ ಜಿಲ್ಲೆಗೆ ಇನ್ನೂ ಒಬ್ಬರ ಸಚಿವರ ಅಗತ್ಯ ಇದೆ ಎಂದರು


ಇದಕ್ಕೂ ಮೊದಲು ಸಚಿವರಿಗೆ ಅವರ ಅಭಿಮಾನಿಗಳು,ವಿವಿಧ ಇಲಾಖೆ ಅಧಿಕಾರಿಗಳು ಹೂ ಗುಚ್ಚ ನೀಡಿ ಅಭಿನಂದಿಸಿ,ಸ್ವಾಗತಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ ಬಲರಾಮ ಕಟ್ಟಿಮನಿ, ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಗ್ಯಾರಂಟಿ ಸಮಿತಿ ಅದ್ಯಕ್ಷ ಶಾನೂಲ ತಹಸಿಲ್ದಾರ ಮೊದಲಾದವರು ಉಪಸ್ಥಿತರಿದ್ದರು.

