Chikkodi

ವಿಕಲಚೇತನರಿಗೆ ಸಾಧನ-ಸಲಕರಣೆ, ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ವಿತರಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Share

ವಿಕಲಚೇತನರು ಜೀವನದಲ್ಲಿ ಧೃತಿಗೆಡಬಾರದು. ಕ್ಷೇತ್ರದ ಪ್ರತಿಯೊಂದು ಗ್ರಾಮದ ವಿಕಲಚೇತನರಿಗೂ ಸಚಿವ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಎಲ್ಲ ಸೌಲಭ್ಯಗಳನ್ನು ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭರವಸೆ ನೀಡಿದರು.

ಚಿಕ್ಕೋಡಿ ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿಕಲಚೇತನ ನಾಗರಿಕರಿಗೆ ವಿವಿಧ ಸಾಧನ-ಸಲಕರಣೆ ಹಾಗೂ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಅಂತರರಾಷ್ಟ್ರೀಯ ವಿಕಲಚೇತನ ಈಜುಪಟು ರಾಘವೇಂದ್ರ ಅನ್ವೇಕರ್ ಅವರ ಸಾಧನೆ ಎಲ್ಲರಿಗೂ ಆದರ್ಶಪ್ರಾಯ ಎಂದು ತಿಳಿಸಿದ ಅವರು, ಶಿಕ್ಷಣ ಕ್ಷೇತ್ರಕ್ಕೂ ತಾವು ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಹೇಳಿದರು.

ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಜಾರಕಿಹೊಳಿ ಮತ್ತು ಹುಕ್ಕೇರಿ ಕುಟುಂಬಗಳು ಸಾಮಾನ್ಯ ಜನರ, ಮಹಿಳೆಯರ ಹಾಗೂ ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ ಎಂದರು. ಅಂತರರಾಷ್ಟ್ರೀಯ ಈಜುಪಟು ರಾಘವೇಂದ್ರ ಅನ್ವೇಕರ್ ಮಾತನಾಡಿ, ವಿಕಲಚೇತನರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿಯವರು
35 ವಾಟರ್ ಬೆಡ್, 25 ಗಾಲಿಕುರ್ಚಿ (ವೀಲ್ ಚೇರ್)
30 ಶ್ರವಣ ದೋಷ ನಿವಾರಣಾ ಸಾಧನ,18 ತ್ರಿಚಕ್ರ ಸ್ಕೂಟರ್
10 ಟ್ಯಾಬ್‌ಗಳು,18 ಮೂರು ಚಕ್ರದ ಸೈಕಲ್
12 ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸ್ವಾಗತಿಸಿದರು. ಮುಖಂಡರಾದ ಮಹಾವೀರ ಮೊಹಿತೆ, ಸುಪ್ರಿಯಾ ದತ್ತಾ ಪಾಟೀಲ, ಪ್ರಭಾಕರ ಕೋರೆ, ಇರ್ಫಾನ ಬೇಪಾರಿ, ಅರ್ಜುನ ನಾಯ್ಕವಾಡಿ, ನಿರ್ಮಲಾ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:

error: Content is protected !!