ಇಲ್ಲಿನ ಪ್ರತಿಷ್ಠಿತ ಸಿ. ಟಿ. ಇ ಸಂಸ್ಥೆಯ ಶ್ರೀಮತಿ ಡಿ.ಕೆ. ಶಹಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕು. ಶ್ರಾವಣಿ ರಾಮಚಂದ್ರ ಅಜ್ಜನಕಟ್ಟಿ ಇವಳು ಭಾರತ್ ಸ್ಕೌಟ್ಸ್, ಗೈಡ್ಸ್ ಮತ್ತು ಬುಲ್ ಬುಲ್ ವಿಭಾಗದ ಅತ್ಯುನ್ನತ ರಾಷ್ಟ್ರಪತಿ ಪುರಸ್ಕಾರವಾದ *‘ಗೋಲ್ಡನ್ ಆರೋ ಅವಾರ್ಡ್ – 2026’ (Golden Arrow Award 2026)* ಪ್ರಶಸ್ತಿಗೆ ಭಾಜನಳಾಗಿದ್ದಾಳೆ.

ದಿನಾಂಕ 05 ಜೂನ್ 2026 ರಂದು ಬೆಳಗಾವಿಯಲ್ಲಿ ಜರುಗಿದ ‘ಭಾರತ್ ಸ್ಕೌಟ್ಸ್, ಗೈಡ್ಸ್ ಮತ್ತು ಬುಲ್ ಬುಲ್ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕಾರ’ ಸಮಾರಂಭದಲ್ಲಿ ಶ್ರಾವಣಿಗೆ ಈ ಅತ್ಯುನ್ನತ ಪ್ರಶಸ್ತಿ ನೀಡಿ ಅತ್ಯಂತ ಸೌರಭದಿಂದ ಸನ್ಮಾನಿಸಲಾಯಿತು.

ಧಾರವಾಡದ ನಿವೃತ್ತ ಉಪನಿರ್ದೇಶಕರು ಹಾಗೂ ಪ್ರಸ್ತುತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯಮಟ್ಟದ ಆಯುಕ್ತರಾದ ಶ್ರೀ ಗಜಾನನ ಮನ್ನಿಕೆರಿ ಮತ್ತು ಜಿಲ್ಲಾ ಸಂಘಟಕರಾದ ಶ್ರೀ ವಿಠಲ್ ನಾಯ್ಕ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಾಧಕ ವಿದ್ಯಾರ್ಥಿನಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ರಾಷ್ಟ್ರಮಟ್ಟದಲ್ಲಿ ಶಾಲೆ ಹಾಗೂ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ ಕು. ಶ್ರಾವಣಿ ರಾಮಚಂದ್ರ ಅಜ್ಜನಕಟ್ಟಿ ಇವಳ ಈ ಮಹೋನ್ನತ ಸಾಧನೆಗೆ ಸಿ.ಟಿ.ಇ ಸಂಸ್ಥೆಯ ಸಮಸ್ತ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿ, ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
