Crime

ಆದಿತ್ಯರಾಜ್ ಕ್ಯಾಪಿಟಲ್ ಪ್ರಕರಣ: 50 ಕೋಟಿಗೂ ಅಧಿಕ ವಂಚನೆ ಶಂಕೆ, ಸಿಐಡಿಗೆ ತನಿಖೆ ಪ್ರಕರಣ ಹಸ್ತಾಂತರ; ಡಿಸಿ ಮೊಹ್ಮದ್ ರೋಷನ್

Share

ಜನರಿಗೆ ಹೆಚ್ಚಿನ ಬಡ್ಡಿಯ ಆಮಿಷ ತೋರಿಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಯ ಅಕ್ರಮ ಜಾಲವನ್ನು ಬೆಳಗಾವಿ ಜಿಲ್ಲಾಡಳಿತ ಪತ್ತೆಹಚ್ಚಿದೆ. ಸೆಬಿ ಮತ್ತು ಆರ್‌ಬಿಐನಲ್ಲಿ ಯಾವುದೇ ನೋಂದಣಿ ಮಾಡಿಕೊಳ್ಳದೆ ವಂಚನೆಗೆ ಇಳಿದಿದ್ದ ಸಂಸ್ಥೆಯ ವಿರುದ್ಧ ಕೆಪಿಐಡಿ ಮತ್ತು ಬಡ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಹಾಗೂ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರು ಜಂಟಿ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಪ್ರಕರಣವನ್ನು ಸಿಐಡಿ ತನಿಗೆ ಹಸ್ತಾಂತರಿಸಲಾಗುತ್ತಿದ್ದು, ಕಂಪನಿ ಮಾಲೀಕನ ವಿರುದ್ಧ ಲೂಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.

ಇಂದು ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರು ಕಳೆದ 2 ದಿನಗಳಿಂದ ಏಕಕಾಲಕ್ಕೆ ಕೆಪಿಐಡಿ, ಬಡ್ಸ್ ಆಕ್ಟ್ ಅಡಿ ತಮ್ಮ ಆದೇಶದಂತೆ ಎಸಿ ಅವರು ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ ಮೇಲೆ ನಡೆಸಿದ್ದು, ಕಳೆದ ರಾತ್ರಿ ಎಫ್.ಐ.ಆರ್ ದಾಖಲಿಸಲಾಗಿದೆ. ಈ ಹಿಂದೆಯೂ ಪೋಂಜಿ ಸ್ಕೀಮ್ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ದೊರೆತಿತ್ತು. ಈ ಹಿನ್ನೆಲೆ ಶಿವಂ ಅಸೋಸಿಯೇಟ್ಸ್ ಮೇಲೆ ದಾಳಿ ನಡೆಸಲಾಗಿತ್ತು. ಇದೇ ವೇಳೆ ಹಲವಾರು ಪೋಂಜಿ ಸ್ಕೀಮ್’ಗಳೊಂದಿಗೆ ಸಂಸ್ಥೆಗಳನ್ನು ನಡೆಸುತ್ತಿರುವ ಮಾಹಿತಿ ದೊರೆತಿದೆ. ಆದಿತ್ಯರಾಜ್ ಕ್ಯಾಪಿಟಲ್’ನಲ್ಲಿ ನಿಯಮಬಾಹಿರವಾಗಿ ಫಂಡ್ ರೇಸಿಂಗ್ ಅಲ್ಲದೇ, ಹೆಚ್ಚಿನ ಬಡ್ಡಿದರ ಶೇ. 5ರಷ್ಟು ತಿಂಗಳಿಗೆ ನೀಡುವು ಆಮಿಷ ತೋರಿಸಲಾಗಿದೆ. ಆದಿತ್ಯರಾಜ್ ಕ್ಯಾಪಿಟಲ್ ಪೋರ್ಟಫೋಲಿಯೋ ಫಂಡ್ ಮ್ಯಾನೇಜರ್ ಆಗಿಲ್ಲ. ಸೆಬಿನಲ್ಲಿ ನೋಂದಣಿ ಕೂಡ ಆಗಿಲ್ಲ. ಇದು ಪೋಂಜಿ ಸ್ಕೀಮ್’ನ ಸ್ಪಷ್ಟತೆಯನ್ನು ನೀಡುತ್ತದೆ. ಸುಮಾರು 6 ವರೆಯಿಂದ 7000 ಸಾವಿರ ಜನ ಠೇವಣಿದಾರರಿದ್ದು, ಸುಮಾರು 50 ಕೋಟಿ ಹಣ ಸಂಗ್ರಹ ಮೀರಿದ ಹಿನ್ನೆಲೆ ಸಿಐಡಿಗೆ ಪ್ರಕರಣವನ್ನು ವರ್ಗಾಯಿಸುತ್ತೇವೆ. ನಿನ್ನೆ ವರದಿ ಬಂದಿದ್ದು ಅಪರ ಮುಖ್ಯ ಕಾರ್ಯಾದರ್ಶಿಗೆ ವರದಿ ಕಳುಸಿದ್ದೇವೆ ಎಂದರು.

ಕಳೆದ ಬಾರಿ ಮಹಿಳೆಯರು ಕೂಡ ವಂಚನೆಗೊಳಗಾಗಿದ್ದರು. ಇಂತಹ ಘಟನೆಗಳು ಆಗದಂತೆ ಕಾನೂನಿನಡಿಯಲ್ಲಿರುವ ಅಧಿಕಾರವನ್ನು ಜನಹಿತದಲ್ಲಿ ಉಪಯೋಗಿಸಲಾಗುತ್ತಿದೆ. ಅಕ್ರಮ ತಡೆ ತಂಡವನ್ನು ಸ್ಥಾಪಿಸಿದ್ದು, ದೂರು ಸಲ್ಲಿಕೆ ಆಗುವ ಮೊದಲೇ ಕೆಪಿಐಡಿ ಆಕ್ಟ್ ಅಡಿ ಕಾರ್ಯಾಚರಣೆ ನಡೆಸಿ, ಕ್ರಮಕೈಗೊಳ್ಳಲಾಗುತ್ತಿದೆ. ಠೇವಣಿದಾರರು ಕಾನೂನು ಸಂಘರ್ಷಕ್ಕೊಳಗಾಗಲ್ಲ. ಅಕ್ರಮವಾಗಿ ಠೇವಣಿ ಸಂಗ್ರಹಿಸಿದವರು ಅಪರಾಧಿಗಳಾಗುತ್ತಾರೆ. ಇಂತಹ ಪ್ರಕರಣಗಳನ್ನು ಬೆಳಕಿಗೆ ತರುತ್ತಿರುವ ನಗರ ಪೊಲೀಸ್ ಆಯುಕ್ತರು ಮತ್ತು ಸಹಕಾರಿ ನಿಬಂಧಕರ ಕಾರ್ಯವನ್ನು ಜಿಲ್ಲಾಧಿಕಾರಿಗಳು ಶ್ಲಾಘಿಸಿದರು. ಯಾವುದೇ ಠೇವಣಿದಾರರು ಭಯಪಡುವ ಅವಶ್ಯತೆಯಿಲ್ಲ. ಠೇವಣಿದಾರರ ಹಣವನ್ನು ಸಂರಕ್ಷಿಸಿ ಮರಳಿ ಕೊಡಿಸುವುದು ನಮ್ಮ ಜವಾಬ್ದಾರಿ. ಮುಂಬರುವ 6 ತಿಂಗಳುಗಳಲ್ಲಿ ಪುರಾವೆಗಳನ್ನು ತೋರಿಸಿದರೇ, ಠೇವಣಿದಾರರ ಹಣವನ್ನು ಮರಳಿ ನೀಡಲಾಗುವುದು ಎಂದರು. ಇನ್ನು ಆದಿತ್ಯ ಕ್ಯಾಪಿಟಲ್ ಸಂಸ್ಥೆಯ ಸಿಇಓ ಬಲರಾಜ್ ಮಾನೆ ದೇಶದಲ್ಲೇ ಇದ್ದು, ಅವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಎಲ್ಲ ಏರ್ ಪೋರ್ಟ್ ಗಳಿಗೆ ಮಾಹಿತಿ ‌ರವಾನೆ ಮಾಡಲಾಗಿದ್ದು, ದೇಶ ಬಿಟ್ಟು ಹೋಗುದಂತೆ ಕ್ರಮಕೈಗೊಳ್ಳಲಾಗಿದೆ ಎಂದರು.

ಇನ್ನು ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಸಹಾಯಕ ಉಪನಿಬಂಧಕರ ದೂರಿನ್ವಯ ಬಡ್ಸ್ ಆಕ್ಟ್, ಕೆಪಿಐಡಿ ಆಕ್ಟ್ ಮತ್ತು ಭಾರತೀಯ ದಂಡ ಸಂಹಿತೆಯಡಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಆದಿತ್ಯ ಕ್ಯಾಪಿಟಲ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಂಸ್ಥೆಯ ಕಾರ್ಯಾಲಯದಲ್ಲಿನ ಕಂಪ್ಯೂಟರ್’ಗಳಿಂದ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಲಾಗಿದೆ. ಸದ್ಯ ಕಂಪನಿಯ ಮಾಲೀಕ ಪರಾರಿಯಾಗಿದ್ದಾರೆ. ಆರ್.ಬಿ.ಐನೊಂದಿಗೆ ಯಾವುದೇ ಅಧಿಕೃತ ನೋಂದಣಿಯನ್ನು ಸಂಸ್ಥೆಯೂ ಹೊಂದಿಲ್ಲ. ಈಗಾಗಲೇ ಪ್ರಮುಖ ಆರೋಪಿ ವಿರುದ್ಧ ಲೂಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆ ಜಾರಿಯಲ್ಲಿದ್ದು, ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ. ಈ ರೀತಿ ಜನರಿಗೆ ವಂಚನೆ ಮಾಡುವರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.

Tags:

error: Content is protected !!