Belagavi

ಭಾರತನಗರ 1 ನೇ ಗಲ್ಲಿ ಪಂಚ ಕಮಿಟಿ ಆಯ್ಕೆ: ಮಹಾದೇವ್ ಪಾಟೀಲ್ ನೂತನ ಸರ್ಪಂಚ!

Share

ಬೆಳಗಾವಿಯ ಭಾರತನಗರ 1 ನೇ ಗಲ್ಲಿಯ ನೂತನ ಪಂಚ ಕಮಿಟಿ ರಚನೆಗಾಗಿ ಇತ್ತೀಚೆಗೆ ಪ್ರಮುಖ ಸಭೆಯನ್ನು ಆಯೋಜಿಸಲಾಗಿತ್ತು. ನೇತಾಜಿ ಸುಭಾಷ್ ಸಾಂಸ್ಕೃತಿಕ ಭವನದಲ್ಲಿ ನಡೆದ ಈ ಸಭೆಯಲ್ಲಿ, ಹಿರಿಯ ಮುಖಂಡರು ಹಾಗೂ ಮಧ್ಯವರ್ತಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಮಹಾದೇವ್ ಪಾಟೀಲ್ ಅವರನ್ನು ಸರ್ಪಂಚರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಬೆಳಗಾವಿಯ ನೇತಾಜಿ ಸುಭಾಷ್ ಸಾಂಸ್ಕೃತಿಕ ಭವನದಲ್ಲಿ ನಡೆದ ನೂತನ ಕಾರ್ಯಕಾರಿಣಿ ಸಭೆಯಲ್ಲಿ, ಭಾರತನಗರ 1 ನೇ ಗಲ್ಲಿಯ ಹೊಸ ಪಂಚ ಕಮಿಟಿಯನ್ನು ಅಧಿಕೃತವಾಗಿ ರಚಿಸಲಾಯಿತು. ಸರ್ಪಂಚರಾಗಿ ಆಯ್ಕೆಯಾದ ಮಹಾದೇವ್ ಪಾಟೀಲ್ ಅವರೊಂದಿಗೆ, ಕಾರ್ಯದರ್ಶಿಯಾಗಿ ವಿಜಯ್ ವಾಂಗಣೇಕರ್ ಹಾಗೂ ಖಜಾಂಚಿಯಾಗಿ ಪ್ರಭಾಕರ್ ಅಷ್ಟೇಕರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇನ್ನು ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂತೋಷ್ ಕನುಕಲೆ, ನಾರಾಯಣ್ ಬಾಮಣೆ, ಅನಿಲ್ ಪಾಟೀಲ್, ಕಿರಣ್ ಹುದ್ದಾರ್, ರಾಜು ಅಷ್ಟೇಕರ್, ಬಂಡು ಸಾಮಜಿ, ಗಣೇಶ್ ದೇಸೂರಕರ್ ಹಾಗೂ ರಾಜು ಸಂಕಣ್ಣವರ್ ಆಯ್ಕೆಯಾಗಿದ್ದಾರೆ.

Tags:

error: Content is protected !!