ಅಲ್ ಇಕ್ರಾ ಎಜ್ಯುಕೇಷನ್ ಆಂಡ್ ವೆಲ್’ಫೇರ್ ಸೊಸೈಟಿಯ ವತಿಯಿಂದ ವಾರ್ಷಿಕ ಸಮಾವೇಶ ಮತ್ತು ಪುರಸ್ಕಾರ ವಿತರಣಾ ಸಮಾರಂಭವು ಅದ್ಧೂರಿಯಾಗಿ ನೆರವೇರಿತು.

ಅಲ್ ಇಕ್ರಾ ಎಜ್ಯುಕೇಷನ್ ಆಂಡ್ ವೆಲ್’ಫೇರ್ ಸೊಸೈಟಿಯ ವತಿಯಿಂದ ವಾರ್ಷಿಕ ಸಮಾವೇಶ ಮತ್ತು ಪುರಸ್ಕಾರ ವಿತರಣಾ ಸಮಾರಂಭವು ಅದ್ಧೂರಿಯಾಗಿ ನೆರವೇರಿತು. ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾದ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಸತ್ಕರಿಸಿ ಪ್ರೋತ್ಸಾಹಿಸಲಾಯಿತು.ಅಲ್ಲದೇ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಉತ್ತರ ಶಾಸಕ ಆಸೀಫ್ ಸೇಠ್, ಮಾಜಿ ಶಾಸಕ ಫಿರೋಜ್ ಸೇಠ್, ಜಮಾತ್ ಎ ಇಸ್ಲಾಂನ ಮಾಜಿ ಅಧ್ಯಕ್ಷ ಶಾಹೀದ್ ಮೇಮನ್, ಡಾ. ಮಾಧವ್ ಪ್ರಭು, ಡಾ. ಅಭಿಲಾಷ್ ಎಸ್., ನಗರಸೇವಕ ಸಮೀವುಲ್ಲಾ ಮಾಡಿವಾಲೆ, ಅಲ್ ಇಕ್ರಾ ಎಜ್ಯುಕೇಷನ್ ಆಂಡ್ ವೆಲ್’ಫೇರ್ ಸೊಸೈಟಿಯ ಅಧ್ಯಕ್ಷ ಶಾಹನವಾಜ್ ಅಹ್ಮದ್ ಖಾನ್ ಇನ್ನುಳಿದವರು ಉಪಸ್ಥಿತರಿದ್ಧರು.
ಈ ಸಂದರ್ಭದಲ್ಲಿ ಜಮಾತ್ ಎ ಇಸ್ಲಾಂನ ಮಾಜಿ ಅಧ್ಯಕ್ಷ ಶಾಹೀದ್ ಮೇಮನ್ ಅವರು ಮಾರ್ಗದರ್ಶನ ನೀಡಿದರು.
ಅದೇ ರೀತಿ ಅಬ್ದುಲ್ ಖಾದೀರ್ ಕಾಲಕುಂದ್ರಿ ಅವರು ಅಲ್ ಇಕ್ರಾ ಎಜ್ಯುಕೇಷನ್ ಆಂಡ್ ವೆಲ್’ಫೇರ್ ಸೊಸೈಟಿಯ ಉಪಕ್ರಮಗಳನ್ನು ತಿಳಿಸಿದರು.
ಈ ವೇಳೆ ಮೊಹ್ಮದ ಅಲಿ ಹುಕ್ಕೇರಿ, ರಶೀದ್ ಮನಿಯಾರ್, ಶಫಾಕತ್’ಮಿಯಾ ಜಮಾದಾರ್, ಜಾವೀದ್ ಪಠಾಣ್, ಇಮ್ತಿಯಾಜ್’ಖಾನ್ ಪಠಾಣ್, ರಝಾಮಿಯಾ ಜಮಾದಾರ್, ಫಹೀಮ್ ಮಾಡಿವಾಲೆ, ನೂರುದ್ಧಿನ ಶೇಖ್’ಸೂರಬ್, ಆರೀಫ್ ಮೇಸ್ತ್ರಿ, ಆಫ್ತಾಬ್ ಆಲಮ್ ಮಾಡಿವಾಲೆ, ಸಯೀದ್ ಅಹ್ಮದ್ ಮುಜಾವರ್ ಇನ್ನುಳಿದವರು ಭಾಗಿಯಾಗಿದ್ಧರು.
