Uncategorized

ಪರಿಸರದ ಬಗ್ಗೆ ಒಂದು ದಿನ ಕಾಳಜಿ ಮಾಡಿದರೆ ಸಾಲದು ಮಕ್ಕಳೇ : ಹುಕ್ಕೇರಿ ಶ್ರೀಗಳು

Share

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೇವಲ ಒಂದು ದಿನ ಗಿಡ ನೆಟ್ಟು ಪರಿಸರ ಪ್ರೇಮ ತೋರಿಸಿದರೆ ಸಾಲದು, ವರ್ಷಪೂರ್ತಿ ಪರಿಸರವನ್ನು ರಕ್ಷಿಸುವ ಸಂಕಲ್ಪ ನಮ್ಮದಾಗಬೇಕು ಎಂದು ಹುಕ್ಕೇರಿ ಹಿರೇಮಠದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದ್ದಾರೆ. ಹುಕ್ಕೇರಿಯ ಗುರುಶಾಂತೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಶ್ರೀಗಳು ಮಕ್ಕಳಿಗೆ ಪರಿಸರ ಜಾಗೃತಿಯ ಬೋಧನೆ ಮಾಡಿದರು.

ವಿಶ್ವ ಪರಿಸರ ದಿನ ಬಂದರೆ ಸಾಕು ಎಲ್ಲರೂ ಒಂದೊಂದು ಗಿಡಗಳನ್ನು ನೆಟ್ಟು ಪರಿಸರದ ಪ್ರೇಮವನ್ನು ತೋರಿಸುವ ವ್ಯವಸ್ಥೆಯನ್ನು ನೋಡುತ್ತಾ ಬಂದಿದ್ದೇವೆ. ಅದು ಆಗಬಾರದು ಪರಿಸರದ ದಿನ ಮಾತ್ರ ಕಾಳಜಿಯನ್ನು ತೋರಿಸಿ ವರ್ಷಪೂರ್ಣ ಏನು ಇಲ್ಲ ಎಂದು ಕುಳಿತು ಕೊಳ್ಳುವುದು ನಿಜಕ್ಕೂ ಒಳಿತಲ್ಲ, ಇವತ್ತು ಮರಗಳ ಸಂಖ್ಯೆ ಕಡಿಮೆಯಾಗಿ ಉಷ್ಟತೆ ಜಾಸ್ತಿ ಆಗಿ ಇಡೀ ವ್ಯವಸ್ಥೆ ಹಾಳಾಗುತ್ತಿರುವುದನ್ನು ನೋಡಿಯೂ ನಾವು ಸುಮ್ಮನೆ ಕುಳಿತು ಕೊಳ್ಳಬಾರದು.

ಗಿಡಗಳನ್ನು ಹಚ್ಚುವುದಷ್ಟೇ ನಮ್ಮ ಕೆಲಸವಲ್ಲ, ರಕ್ಷಣೆಯೂ ಕೂಡ ನಮ್ಮ ಕೆಲಸವಗಬೇಕು ಎಂದು ನಗರದ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಗುರುಶಾoತೇಶ್ವರ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ ಆಚರಿಸಿ ಗಿಡವನ್ನು ನೆಟ್ಟು ಮಕ್ಕಳಿಗೆ ಪರಿಸರದ ವಿಚಾರವನ್ನು ಬೋಧಿಸಿ ಎಲ್ಲಾ ಮಕ್ಕಳು ನಿಮ್ಮ ಮನೆಯ ಮುಂದೆ, ನಿಮ್ಮ ಹೊಲಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸಲು ಸನ್ನದ್ಧರಾಗಿ ಎಂದು ಪ್ರಮಾಣ ಮಾಡಿಸಿದರು.

ಇದೆ ಸಂದರ್ಭದಲ್ಲಿ ಮುಖ್ಯ ಅಧ್ಯಾಪಕ ಶಿವಾನಂದ ಜಿನರಾಳೆ ಹಾಗೂ ಸಹ ಶಿಕ್ಷಕ, ಶಿಕ್ಷಕಿಯರು ಇದೆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಲ್ಲಾ ಮಕ್ಕಳು ಗುರುಗಳೇ ನೀವೂ ಹೇಳಿದಂತೆ ನಾವು ನಡೆದು ಕೊಳ್ಳುತ್ತೇವೆ. ನಾವು ಕೂಡ ನಮ್ಮ ಪರಿಸರದಲ್ಲಿ ಗಿಡಗಳನ್ನು ನೆಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.

Tags:

error: Content is protected !!