ಶಿಕ್ಷಕರಿಗೆ ನಮ್ಮ ಭಾರತೀಯ ಸಮಾಜದಲ್ಲಿ ಅತ್ಯುನ್ನತ ಸ್ಥಾನ ನೀಡಲಾಗಿದೆ, ದೇವರಿಗೆ ಸಮಾನವಾಗಿ ಹೋಲಿಸುತ್ತೇವೆ. ಆದರೆ, ಇಲ್ಲೊಬ್ಬ ಶಿಕ್ಷಕ ಹೊಲಸು ತಿನ್ನುವ ಕೆಲಸವೊಂದನ್ನು ಮಾಡಿದ್ದಾನೆ.. ತನ್ನ ವಿದ್ಯಾರ್ಥಿನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಲ್ಲದೇ, ಆಕೆ ಬಿಟ್ಟು ಹೋದ ನಂತರವೂ ಆಕೆಯನ್ನು ಕರೆಯಿಸುವಂತೆ ಇನ್ನೋರ್ವ ವಿದ್ಯಾರ್ಥಿಯ ಮೇಲೆ ಒತ್ತಡ ಹಾಕುತ್ತಿದ್ದಾನೆ..ಇಷ್ಟಕ್ಕೂ ಇದು ನಡೆದಿರುವುದು ಎಲ್ಲಿ…. ಯಾರು ಆ ಕಿರಾತಕ ಶಿಕ್ಷಕ ಅಂತೀರಾ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ…

ಧಾರವಾಡ ಕವಿವಿಯ ಪ್ರೊಫೆಸರರೊಬ್ಬನ ಕರ್ಮಕಾಂಡ ಬಯಲಿಗೆ

ತನ್ನದೇ ವಿಭಾಗದ ವಿದ್ಯಾರ್ಥಿನಿಯೊಂದಿಗೆ ಲವ್ವಿಡವಿ, ಪಿಹೆಚ್ಡಿ ವಿದ್ಯಾರ್ಥಿಗೂ ಕಿರುಕುಳ
ಬಿಟ್ಟು ಹೋದ ವಿದ್ಯಾರ್ಥಿನಿಯನ್ನು ಮರಳಿ ಕರೆಸುವಂತೆ ಪಿಹೆಚ್.ಡಿ ವಿದ್ಯಾರ್ಥಿಗೆ ಟಾರ್ಚರ್.
ಈ ಫೋಟೋದಲ್ಲಿ ವಿದ್ಯಾರ್ಥಿನಿಯೊಂದಿಗೆ ಫೋಸ್ ಕೊಟ್ಟಿರುವ ಪ್ರೊಫೆಸರನ ಹೆಸರು ಪ್ರೊ.ದೇವರಾಜ ತಂಗುದೊರೈ. ಇಂದು ಇತ ತನ್ನ ವೃತಿ ನಿಷ್ಠೇಯಿಂದ ಮಾಡಿದ್ರೆ ಇತನ ಕಥೆ ಹೇಳುವ ಅವಶ್ಯ ಇರಲಿಲ್ಲ, ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರನಾಗಿದ್ದು, ಈತನಿಗೆ ಹುಡುಗಿಯರ ಚಪಲ. ಹೀಗೆ ಈತನ ಬಳಿ ಪಿಎಚ್ಡಿ ಮಾಡಲು ಬಂದಿದ್ದ ವಿಜಯಪುರ ಮೂಲದ ವಿದ್ಯಾರ್ಥಿನಿಯೋರ್ವಳನ್ನು ಈತ ಹೇಗೋ ಪಟಾಯಿಸಿದ್ದ. ಆಕೆಯೊಂದಿಗೆ ಕಳೆದ ಕೆಲ ವರ್ಷಗಳಿಂದ ದೈಹಿಕ ಸಂಪರ್ಕವನ್ನೂ ಹೊಂದಿದ್ದನಂತೆ. ಆದರೆ, ಈ ಎಲ್ಲ ವಿಷಯ ಗೊತ್ತಾದ ಕೂಡಲೇ ಆ ವಿದ್ಯಾರ್ಥಿನಿಯನ್ನು ಆಕೆಯ ಮನೆಯವರು ಪಿಎಚ್ಡಿಯನ್ನು ಅರ್ಧಕ್ಕೆ ನಿಲ್ಲಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ…ಇದರಿಂದ ಸೈಕೋ ಆದಂತಾದ ಪ್ರೊ.ದೇವರಾಜ್, ಅದೇ ವಿಜಯಪುರ ಮೂಲದ ವೇದವ್ಯಾಸ್ ಚೌಹಾಣ್ ಎಂಬುವವರು ಆತನ ಬಳಿ ಪಿಎಚ್ಡಿ ಗೈಡ್ ಪಡೆಯಲು ಹೋಗಿದ್ದರು. ಮೊದ ಮೊದಲು ವೇದವ್ಯಾಸಗೆ ಗೈಡ್ ಮಾಡಿರುವ ಪ್ರೊ.ದೇವರಾಜ್, ಪಿಎಚ್ಡಿ ಮುಗಿಯುವ ಹಂತ ಬಂದಾಗ, ತನ್ನನ್ನು ಬಿಟ್ಟು ಹೋದ ಆ ವಿದ್ಯಾರ್ಥಿನಿಯನ್ನು ಮರಳಿ ಕರೆಯಿಸುವಂತೆ ವೇದವ್ಯಾಸ್ಗೆ ಕಿರುಕುಳ ನೀಡಿದ್ದಾನೆ. ಆಕೆಯನ್ನು ಮರಳಿ ಕರೆಯಿಸಿದರೆ ಮಾತ್ರ ಪಿಎಚ್ಡಿ ಪೂರ್ಣ ಮಾಡಿಕೊಡುತ್ತೇನೆ. ಇಲ್ಲದೇ ಇದ್ದರೆ ಇಲ್ಲ ಎಂದು ವೇದವ್ಯಾಸ್ಗೆ ಪ್ರೊ.ದೇವರಾಜ್ ಒತ್ತಾಯ ಮಾಡಿದ್ದಾನೆ. ಇದರಿಂದ ಕಂಗಾಲಾದ ವೇದವ್ಯಾಸ್ ಅವರು ಈ ಸಂಬಂಧ ಕುಲಸಚಿವರಿಗೆ ಹಾಗೂ ವಿದ್ಯಾರ್ಥಿ ಸಂಘಟನೆಯವರಿಗೆ ದೂರು ನೀಡಿದ್ದಾರೆ. ಅಲ್ಲದೇ ಆ ವಿದ್ಯಾರ್ಥಿನಿ ಜೊತೆಗೆ ತಾನು ಹೇಗಿದ್ದ ಎಂಬುದರ ಕುರಿತಾಗಿಯೂ ವೇದವ್ಯಾಸ್ಗೆ ಪ್ರೊ.ದೇವರಾಜ ವಿವರಣೆ ನೀಡಿದ್ದಾನೆ. ಆ ಕುರಿತ ಆಡಿಯೋಗಳು ಇದೀಗ ಲಭ್ಯವಾಗಿವೆ
ತನ್ನದೇ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಜೊತೆ ಲವ್ವಿಡವ್ವಿ ಹೊಂದಿದ್ದ ಈ ಪ್ರೊ.ದೇವರಾಜ್, ಆಕೆಯೊಂದಿಗಿನ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲೂ ಹಾಕಿಕೊಂಡಿದ್ದಾನೆ. ಅಲ್ಲದೇ ಆಕೆಗೆ ಮೂರು ಬಾರಿ ಅಬಾಷನ್ ಕೂಡ ಮಾಡಿಸಿದ್ದಾನಂತೆ. ಇಷ್ಟೆಲ್ಲ ಮಾಡಿರುವ ಪ್ರೊಫೆಸರ್ ಮೇಲೆ ಶಿಸ್ತು ಕ್ರಮ ಆಗಬೇಕು, ಆತನನ್ನು ಅಮಾನತ್ತು ಮಾಡಿ ಪೊಲೀಸ್ ದೂರು ದಾಖಲಿಸಬೇಕು ಎಂದು ಕವಿವಿ ವಿದ್ಯಾರ್ಥಿ ಸಂಘಟನೆಯವರು ಆಗ್ರಹಿಸಿದ್ದಾರೆ….
ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ಕೇಳಿದರೆ ಪ್ರೊ.ದೇವರಾಜ್, ಅದು ಏನಾದರೂ ಇರಲಿ. ಇದು ಅಕಾಡೆಮಿಕ್ ವಿಷಯ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎನ್ನುತ್ತಾನೆ ಪ್ರೊಫೆಸರ್.
ಸದ್ಯ ಈ ವಿಚಾರವನ್ನು ಕವಿವಿಯ ವಿದ್ಯಾರ್ಥಿ ಸಂಘಟನೆಯವರು ಗಂಭೀರವಾಗಿ ಪರಿಗಣಿಸಿದ್ದು, ಹೋರಾಟಕ್ಕೆ ಮುಂದಾಗಿದ್ದಾರೆ. ಜತೆಗೆ ಈಗ ಕುಲಪತಿ ಹಾಗೂ ಕುಲಸಚಿವರ ಗಮನಕ್ಕೂ ವಿಷಯವಿದ್ದು, ಈ ಬಗ್ಗೆ ಕುಲಪತಿಗಳು ಯಾವ ಹೆಜ್ಜೆ ಇಡುತ್ತಾತೆ ಎಂಬುವುದು ಕಾದು ನೋಡಬೇಕಿದೆ.
