State

ಶೈಕ್ಷಣಿಕ ನೂತನ ವರ್ಷಕ್ಕೆ ಶುಭ ಕೋರಿದ ಡಿ.ಕೆ. ಶಿವಕುಮಾರ್

Share

ರಾಜ್ಯದಲ್ಲಿ ಇಂದಿನಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು, ಶಾಲಾ-ಕಾಲೇಜುಗಳತ್ತ ಹೆಜ್ಜೆ ಇಡುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಡಿ.ಕೆ.ಶಿವಕುಮಾರ್ ಅವರು ಪ್ರೀತಿಯ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ರಾಜ್ಯದ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ಶೈಕ್ಷಣಿಕ ಹೊಸ ವರ್ಷ ಇಂದಿನಿಂದ ಪ್ರಾರಂಭವಾಗುತ್ತಿದೆ. ಸರ್ಕಾರದ ಪರವಾಗಿ ಮತ್ತು ವೈಯಕ್ತಿಕವಾಗಿ ನೂತನ ಶಿಕ್ಷಣ ವರ್ಷಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ರಾಜ್ಯದ ವಿದ್ಯಾರ್ಥಿಗಳು ಇಡೀ ದೇಶಕ್ಕೆ ಮಾನವ ಸಂಪನ್ಮೂಲದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೆಮ್ಮೆಯನ್ನು ವ್ಯಕ್ತಪಡಿಸಿದರು.

ಇನ್ನು ಹಿಜಾಬ್ ಪ್ರತಿಯಾಗಿ ಬಿಜೆಪಿ ನಾಯಕರು ಕೇಸರಿ ಶಾಲ್ ನೀಡುವ ಅಭಿಯಾನದ ಕುರಿತು ಕೇಸರಿ ಶಾಲು ಬೇಕೋ ರಾಷ್ಟ್ರ ಧ್ವಜದ ಶಾಲು ಎಂಬ ಬಗ್ಗೆ ನಂತರ ಚರ್ಚೆ ಮಾಡೋಣ. ಸದ್ಯ ದೆಹಲಿಗೆ ತಾವು ಹಾಗೂ ಸಿದ್ಧರಾಮಯ್ಯನವರು ತೆರಳುತ್ತಿರುವುದಾಗಿ ತಿಳಿಸಿದರು.

Tags:

error: Content is protected !!