Kagawad

ನಾನು ಒನ್ ಮ್ಯಾನ್ ಶೋ, ಟೈಗರ್ ಸಿಂಗಲ್ ಇರುತ್ತೆ”

Share

ಅಧಿಕಾರವನ್ನು ನಾನು ಕೇಳಿ ಪಡೆಯುವುದಿಲ್ಲ. ಪಕ್ಷ ನನ್ನ ಕೆಲಸವನ್ನು ಗುರುತಿಸಿ ಸಚಿವ ಸ್ಥಾನ ನೀಡಿದರೆ ಸ್ವೀಕರಿಸುತ್ತೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಕಾಗವಾಡ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಖಾತೆಯ ಸಚಿವ ಸ್ಥಾನ ನೀಡಿದರೂ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ನನ್ನಲ್ಲಿದೆ. ಅಧಿಕಾರಕ್ಕಾಗಿ ಯಾರ ಬೆಂಬಲವೂ ನನಗೆ ಅಗತ್ಯವಿಲ್ಲ. ಸಚಿವ ಸ್ಥಾನ ನೀಡಿದರೆ ಸಂತೋಷ, ನೀಡದಿದ್ದರೂ ಸಂತೋಷವೇ ಎಂದು ಹೇಳಿದರು.
ರಾಜ್ಯದಲ್ಲಿ 140ಕ್ಕೂ ಹೆಚ್ಚು ಶಾಸಕರಿಗೆ ಸಚಿವರಾಗುವ ಆಸೆ ಇರುತ್ತದೆ. ಆದರೆ ಸಚಿವ ಸಂಪುಟದಲ್ಲಿ ಕೇವಲ 33 ಮಂದಿಗೆ ಮಾತ್ರ ಅವಕಾಶ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ “ನಾನು ಒನ್ ಮ್ಯಾನ್ ಶೋ, ಟೈಗರ್ ಸಿಂಗಲ್ ಇರುತ್ತೆ” ಎಂದು ಹೇಳುವ ಮೂಲಕ ತಮ್ಮ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.

Tags:

error: Content is protected !!