hubbali

ಚರಂಡಿಗೆ ಶೌಚಾಲಯದ ಮಲ ಚರಂಡಿಗಳಿಗೆ ಹರಿಬಿಟ್ಟ ಸೆಪ್ಟಿಕ್ ಟ್ಯಾಂಕ್ ವಾಹನ ! ಜನಾಕ್ರೋಶ

Share

ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡಿದ ಮಲ ಮತ್ತು ನೀರನ್ನು ಹಳ್ಳಿಗಳ ಚರಂಡಿಗಳಿಗೆ ಹರಿ ಬಿಡುವ ಖಾಸಗಿ ವಾಹನವೊಂದು ಪ್ರತ್ಯಕ್ಷವಾಗಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಮತ್ತು ಸಾರ್ವಜನಿಕ ಕಣ್ಣಿಗೆ ಸಿಕ್ಕಿ ಬಿದ್ದಿದೆ.

ಹೌದು ! ಎಲ್ಲೇಡೆ ಸಾಂಕ್ರಾಮಿಕ ರೋಗಗಳೆ ಅತಿಯಾಗಿ ಜನ ಯಾತನೆ ಪಡುತ್ತಿರುವ ದಿನಗಳಲ್ಲಿ ಹುಬ್ಬಳ್ಳಿ ತಾಲುಕೂ ನೂಲ್ವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಪಕ್ಕದ ಚರಂಡಿಗಳಲ್ಲಿ ಪಿ.ಆರ್.ಕೆ ಹೆಸರಿನ ಖಾಸಗಿ ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗ್ ವಾಹನ ಖಾಸಗಿ ಮನೆಗಳ ಶೌಚಾಲಯದ ಮಲ ತುಂಬಿಕೊಂಡು ಬಂದು ರಾಜಾರೋಷವಾಗಿ ಚರಂಡಿಗೆ ಹರಿಬಿಡುತ್ತಿದೆ.

ಕೆಎ-20 ಎಬಿ-1160 ಸಂಖ್ಯೆಯ ಸೆಪ್ಟಿಕ್ ಟ್ಯಾಂಕ್ ಕ್ಲಿನಿಂಗ್ ವಾಹನದ ಚಾಲಕ ಮತ್ತು ಸಿಬ್ಬಂದಿ ನೂಲ್ವಿ ಗ್ರಾಮದ ಚರಂಡಿಯಲ್ಲಿ ಶೌಚಾಲಯದ ಮಲವನ್ನು ಬೇಕಾಬಿಟ್ಟಿ ಹರಿ ಬಿಡುವ ವೇಳೆ ಜನರ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

ನಿಯಮಾನುಸಾರ ಸೆಪ್ಟಿಕ್ ಟ್ಯಾಂಕ್ ತುಂಬಿಕೊಂಡ ಮಲವನ್ನು ಪ್ರತ್ಯೇಕ ಜಾಗದಲ್ಲಿ ಬಿಡಬೇಕು, ಆದರೆ ನಿತ್ಯ ಜನ ಓಡಾಡುವ, ನಿವಾಸಿಗಳು ವಾಸಿಸುವ ಮನೆಯ ಚರಂಡಿಗೆ ಮಲ ಹರಿಬಿಡುತ್ತಿರವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಅವ್ಯವಸ್ಥೆಯನ್ನು ನೂಲ್ವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಕಾಳೆ ಅವರ ಗಮನಕ್ಕೂ ತರಲಾಗಿದ್ದು, ಸಂಬಂಧಪಟ್ಟ ಗ್ರಾಮೀಣ ಪೊಲೀಸ್ ಅಧಿಕಾರಿಗಳು, ಆರ್.ಟಿ.ಓ ಅಧಿಕಾರಿಗಳು ಈ ವಾಹನದ ಬಗ್ಗೆ ಕ್ರಮ ಕೈಗೊಳ್ಳುವಂತೆ ಜನರಿಂದ ಒತ್ತಾಯ ಕೇಳಿ ಬಂದಿವೆ.

Tags:

error: Content is protected !!