Hukkeri

ಹುಕ್ಕೇರಿ : – ಹಿಂದೂ ಮುಸ್ಲಿಂ ಬಾಂಧವರ ಸೌಹಾರ್ದ ಹಬ್ಬ ಬಕ್ರೀದ – ಜಮಾತ ಅದ್ಯಕ್ಷ ಸಲೀಂ ನದಾಫ್.

Share

ಹಿಂದೂ ಮುಸ್ಲಿಂ ಬಾಂಧವರ ಸೌಹಾರ್ದ ಮತ್ತು ತ್ಯಾಗ ಬಲಿದಾನದ ಹಬ್ಬ ಬಕ್ರೀದ ಹಬ್ಬವಾಗಿದೆ ಎಂದು ಹುಕ್ಕೇರಿ ಹನ್ನೂಂದು ಜಮಾತ ಅದ್ಯಕ್ಷ ಸಲಿಂ ನದಾಫ್ ಹೇಳಿದರು ಅವರು ಇಂದು ಹುಕ್ಕೇರಿ ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನೇರವೇರಿಸಿ ಮಾದ್ಯಮಗಳೊಂದಿಗೆ ಮಾತನಾಡಿದರು.

ಇಸ್ಲಾಂ ಧರ್ಮದಲ್ಲಿ ಪ್ರವಾದಿ ಇಬ್ರಾಹಿಂ ಅಲ್ಲಾಹುನಿಗಾಗಿ ಹೆಂಡತಿ ಮಗುವನ್ನು ತ್ಯಾಗ ಮಾಡಿದ ಹಿನ್ನಲೆಯಲ್ಲಿ ಪ್ರತಿ ವರ್ಷ ಅಲ್ಲಾನ ಪ್ರೀತಿಗಾಗಿ ಭೂಲೋಕದ ಅಕ್ರಮಗಳನ್ನು ತ್ಯಾಗ ಮಾಡುವಂತೆ ನಮ್ಮಲ್ಲಿಯ ಅಹಂ ಅನ್ನು ಬಲಿಕೊಡುವಂತೆ ಬಕ್ರೀದ ಹಬ್ಬ ಆಚರಿಸಲಾಗುತ್ತಿದೆ.
ಹುಕ್ಕೇರಿ ನಗರದ ಸಮಸ್ತ ಮುಸಲ್ಮಾನ ಬಾಂಧವರು ಪಟ್ಟಣದ ಹೋರವಲಯದ ಈದ್ಗಾ ಮೈದಾನದಲ್ಲಿ ಹನ್ನೂಂದು ಜಮಾತ ಮತ್ತು ಅಂಜುಮನ ಕಮೀಟಿ ಸದಸ್ಯರು ಸಾಮೂಹಿಕ ಪ್ರಾರ್ಥನೆ ಮಾಡಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅಂಜುಮನ ಕಮೀಟಿ ಅದ್ಯಕ್ಷ ಮತ್ತು ಹನ್ನೋಂದು ಜಮಾತ ಅದ್ಯಕ್ಷ ಸಲೀಂ ನದಾಫ್ ಹಾಗೂ ಇರ್ಷಾದ ಮೋಕಾಶಿ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ ಹಬ್ಬವನ್ನು ಇಂದು ಹುಕ್ಕೇರಿ ನಗರದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಆಚರಿಸುವ ಮೂಲಕ ಸೌಹಾರ್ದತೆ ಮೇರೆದಿದ್ದಾರೆ , ದೇಶದಲ್ಲಿ ಮಳೆ ಬೆಳೆ ಚನ್ನಾಗಿ ಬಂದು ಎಲ್ಲ ಧರ್ಮಿಯರು ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳುವಂತೆ ಅಲ್ಲಾಹುವಿನಲ್ಲಿ ಪ್ರಾರ್ಥನೆ ಮಾಡಲಾಗಿದೆ ಎಂದರು

ಅದೆ ರೀತಿ ನಗರದ ಜುಮ್ಮಾ ಮಶೀದಿ, ಮರ್ಕಸ್, ಜಾಮಾ ಮಜೀದ, ಮಹಮ್ಮದಿಯಾ ಮಜೀದ, ಗಜಬರವಾಡಿ ಮಜೀದ ಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ಜರುಗಿದವು.
ನಂತರ ಒಬ್ಬರಿಗೊಬ್ಬರು ಹಬ್ಬದ ಶುಭಾಶಯ ಹಂಚಿಕೊಂಡು ಸಿಹಿ ಭೋಜನ ಸವಿದರು.
ಈ ಸಂದರ್ಭದಲ್ಲಿ ಶಬ್ಬೀರ ಸನದಿ, ಇರ್ಷಾದ ಮೋಕಾಶಿ, ನಾಶೀರ ಸುತಾರ,ಜಿ ಎಸ್ ಅಮ್ಮಣಗಿ, ದಸ್ತಗೀರ ಖಾಜಿ, ಅಷರಫ್ ಖಾನಜಾದೆ, ಡಿ ಆರ್ ಖಾಜಿ, ಅಮಾನುಲ್ಲಾ ಖಾಜಿ,ರಾಜು ಮುಜಾವರ,ಅಲಂ ಮಕಾನದಾರ ಸೇರಿದಂತೆ ಅಂಜುಮನ ಕಮೀಟಿ ಮತ್ತು ಹನ್ನೂಂದು ಜಮಾತ ಸದಸ್ಯರು ಹಾಗೂ ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!