BELAGAVI

ಬೆಳಗಾವಿಯ ನೂತನ ತಹಶೀಲ್ದಾರ್ ಆಗಿ ಹಣಮಂತ ಶಿರಹಟ್ಟಿ ನೇಮಕ

Share

ಬೆಳಗಾವಿ ಕಂದಾಯ ಇಲಾಖೆಯಲ್ಲಿ ಮಹತ್ವದ ವರ್ಗಾವಣೆಯಾಗಿದೆ. ಬೆಳಗಾವಿಯ ನೂತನ ತಹಶೀಲ್ದಾರರನ್ನಾಗಿ ಹಣಮಂತ ಶಿರಹಟ್ಟಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಳಗಾವಿ ತಹಶೀಲ್ದಾರರಾಗಿದ್ದ ಬಸವರಾಜ್ ನಾಗರಾಳ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದ್ದು, ತೆರವಾದ ಸ್ಥಾನಕ್ಕೆ ಹಣಮಂತ ಶಿರಹಟ್ಟಿ ಅವರನ್ನು ನಿಯೋಜಿಸಲಾಗಿದೆ. ಇನ್ನು ನೂತನ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ಹಣಮಂತ ಶಿರಹಟ್ಟಿ ಅವರು, ಈ ಮೊದಲು ಬೈಲಹೊಂಗಲ ತಾಲೂಕಿನ ಗ್ರೇಡ್-1 ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಕರ್ನಾಟಕ ರಾಜ್ಯಪಾಲರ ಆದೇಶದನ್ವಯ ಕಂದಾಯ ಇಲಾಖೆಯು ಈ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡು ಅಧಿಕೃತ ಆದೇಶ ಹೊರಡಿಸಿದೆ.

Tags:

error: Content is protected !!