Athani

ಅಥಣಿಯಲ್ಲಿ ವರದಕ್ಷಿಣೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ

Share

ಸಮಾಜವನ್ನು ಕಾಡುತ್ತಿರುವ ಬಾಲ್ಯ ವಿವಾಹ ಮತ್ತು ವರದಕ್ಷಿಣೆ ಪದ್ಧತಿ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಥಣಿಯಲ್ಲಿ ಅದ್ದೂರಿ ಕಾನೂನು ಅರಿವು ಕಾರ್ಯಕ್ರಮ ಜರುಗಿತು.

ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಬೆಳಗಾವಿ, ಶಿಶು ಅಭಿವೃದ್ಧಿ ಯೋಜನೆ ಅಥಣಿ ಹಾಗೂ ಭರವಸೆ ಬೆಳಕು ಫೌಂಡೇಶನ್ ಅಥಣಿ ಇವರ ಸಂಯುಕ್ತ ಆಶ್ರಯದಲ್ಲಿ “ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ” ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಅಣ್ಣಪ್ಪ ಹೆಗಡೆ, “ಬಾಲ್ಯ ವಿವಾಹ ಮತ್ತು ವರದಕ್ಷಿಣೆ ಸಮಾಜದ ಪಿಡುಗುಗಳಾಗಿದ್ದು, ಇವುಗಳ ನಿರ್ಮೂಲನೆಗೆ ಸಾರ್ವಜನಿಕರ ಜಾಗೃತಿ ಅತ್ಯಗತ್ಯ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಥಣಿಯ ಖ್ಯಾತ ವಕೀಲ ಅಮೋಘಸಿದ್ದ ಕೊಬ್ರಿ ಮಾತನಾಡಿ, “ಕಾನೂನು ಅರಿವು ಪ್ರತಿಯೊಬ್ಬರಿಗೂ ತಲುಪಿದಾಗ ಮಾತ್ರ ಅಪರಾಧಮುಕ್ತ ಸಮಾಜ ನಿರ್ಮಾಣ ಸಾಧ್ಯ” ಎಂದು ಅಭಿಪ್ರಾಯಪಟ್ಟರು. ಈ ವೇಳೆ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ಕವಿತಾ ಹೊಸಮನಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ ಸೌಂದಲಗೇಕರ ಇಲಾಖೆಯ ಯೋಜನೆಗಳು ಹಾಗೂ ಕಾಯ್ದೆಗಳ ಜಾರಿಗೆ ಸಂಬಂಧಿಸಿದ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೂಪಾ ಕಾಂಬಳೆ ವಹಿಸಿದ್ದರು. ಹಿರಿಯ ಮೇಲ್ವಿಚಾರಕರಾದ ಆರ್ .ಬಿ ಮುಜಾವರ ಉಪಸ್ಥಿತರಿದ್ದರು.

ಘನ ಉಪಸ್ಥಿತಿಯಲ್ಲಿ ಅಥಣಿ ಪಿ.ಎಸ್.ಐ ಗಿರಿಮಲ್ಲಪ್ಪ ಉಪ್ಪಾರ, ಮಾನವ ಹಕ್ಕುಗಳ ಆಯೋಗದ ಜಿಲ್ಲಾ ಅಧ್ಯಕ್ಷ ಅಶೋಕ ಕೆಂಗನ್ನವರ, ತಾಲೂಕು ಅಧ್ಯಕ್ಷೆ ಗೀತಾ ಮಡ್ಡಿ ಹಾಗೂ ತಾಲೂಕು ಉಪಾಧ್ಯಕ್ಷೆ ಸವಿತಾ ಕಾಂಬಳೆ ಸೇರಿದಂತೆ ಹಲವಾರು ಮುಖಂಡರು, ಮಹಿಳೆಯರು ಮತ್ತು ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Tags:

error: Content is protected !!