ಬೆಳಗಾವಿಯ ಶ್ರೀ ಸ್ವಾಮಿ ಸಮರ್ಥ ಸೇವಾ ಆಧ್ಯಾತ್ಮಿಕ ಮತ್ತು ಬಾಲ ವಿಕಾಸ ಕೇಂದ್ರದ ವತಿಯಿಂದ ಮುಂಬರುವ ಮೇ 27 ರಂದು ಬುಧವಾರದಂದು ದೇಶ-ವಿದೇಶ ಅಭಿಯಾನದ ಅಂಗವಾಗಿ ‘ರಾಷ್ಟ್ರೀಯ ಸತ್ಸಂಗ ಮತ್ತು ಸಂಸ್ಕಾರ ಅಭಿಯಾನ’ವನ್ನು ಆಯೋಜಿಸಲಾಗಿದೆ. ವಡಗಾವಿಯ ಸಪಾರ್ ಗಲ್ಲಿಯಲ್ಲಿರುವ ಶ್ರೀ ಬನಶಂಕರಿ ಮಂಗಲ ಕಾರ್ಯಾಲಯದಲ್ಲಿ ಈ ಭವ್ಯ ಕಾರ್ಯಕ್ರಮ ಜರುಗಲಿದೆ.

ಬುಧವಾರ ಮೇ 27 ರಂದು ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿ ಸಮರ್ಥ ಸೇವಾ ಮಾರ್ಗದ ಗುರುಪುತ್ರರಾದ ಶ್ರೀ ನಿತೀನ್ಭಾವು ಮೋರೆ ಅವರು ದಿವ್ಯ ಉಪಸ್ಥಿತಿ ವಹಿಸಲಿದ್ದಾರೆ. ಅಂದು ಬೆಳಿಗ್ಗೆ 8 ಗಂಟೆಯಿಂದಲೇ ವಿವಿಧ ಧಾರ್ಮಿಕ ಹಾಗೂ ಸಂಸ್ಕಾರ ಕಾರ್ಯಕ್ರಮಗಳು ಆರಂಭವಾಗಲಿವೆ. ಈ ಅಭಿಯಾನದ ಮೂಲಕ ಸಂಸ್ಥೆಯು ಸಾರ್ವಜನಿಕರಿಗಾಗಿ ಉಚಿತವಾಗಿ ಹಮ್ಮಿಕೊಳ್ಳುತ್ತಿರುವ ವಿವಿಧ ಜನಪರ ಉಪಕ್ರಮಗಳು, ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ಬಾಲ ವಿಕಾಸದ ಯೋಜನೆಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಲಾಗುವುದು. ಈ ಮಹತ್ವದ ರಾಷ್ಟ್ರೀಯ ಸತ್ಸಂಗ ಕಾರ್ಯಕ್ರಮದಲ್ಲಿ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಭಕ್ತಾಧಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಘಟಕರು ಮನವಿ ಮಾಡಿದ್ದಾರೆ.

