KHANAPUR

ಖಾನಾಪುರ-ಬೀಡಿ ರಸ್ತೆಯಲ್ಲಿ ತಪ್ಪಿದ ಭೀಕರ ದುರಂತ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ನುಗ್ಗಿದ ಬಸ್!

Share

• ಕುಣಕಿಕೊಪ್ಪ ಬಳಿ ನಿಯಂತ್ರಣ ತಪ್ಪಿದ ಬಸ್
• ಸ್ಟೇರಿಂಗ್ ಲಾಕ್ ಆಗಿದ್ದರಿಂದ ಸಂಭವಿಸಿದ ಅಪಘಾತ
• ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯ ಪ್ರಾಣಾಪಾಯದಿಂದ ಪಾರು
ಖಾನಾಪುರ-ಬೀಡಿ ರಸ್ತೆಯ ಕುಣಕಿಕೊಪ್ಪ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿ ಬಸ್ಸೊಂದು ರಸ್ತೆ ಬದಿಗೆ ನುಗ್ಗಿ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಪ್ರವಾಸಿಗರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಒಂದು ದೊಡ್ಡ ದುರಂತ ತಪ್ಪಿದಂತಾಗಿದೆ.

ಖಾನಾಪುರ ತಾಲೂಕಿನ ಖಾನಾಪುರ-ಬೀಡಿ ಮುಖ್ಯ ರಸ್ತೆಯ ಕುಣಕಿಕೊಪ್ಪ ಗ್ರಾಮದ ಬಳಿ ಪ್ರವಾಸಿ ಬಸ್ಸೊಂದರ ಸ್ಟೇರಿಂಗ್ ದಿಢೀರ್ ಲಾಕ್ ಆದ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ನುಗ್ಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಅಥವಾ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ನಂದಗಡ ಪೊಲೀಸ್ ಠಾಣೆಯ ಹವಾಲ್ದಾರ್ ರಾಮಪ್ಪ ಖೇಮಾಳೆ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ರಸ್ತೆಯ ಮೇಲಿನ ವಾಹನ ದಟ್ಟಣೆಯನ್ನು ನಿಯಂತ್ರಿಸಿ ಸಂಚಾರ ಸುಗಮಗೊಳಿಸಿದ ಅವರು, ಗಾಯಗೊಂಡ ಪ್ರವಾಸಿಗರಿಗೆ ಮುಂದಿನ ಪ್ರಯಾಣ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಸಕಲ ಅನುಕೂಲ ಮತ್ತು ವ್ಯವಸ್ಥೆಗಳನ್ನು ಮಾಡಿಕೊಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Tags:

error: Content is protected !!