Dharwad

ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸ್ ಸಿಬ್ಬಂದಿ ಕಿರುಕುಳಕ್ಕೆ ವಿದ್ಯಾರ್ಥಿ ಆದಿತ್ಯ ಆತ್ಮಹತ್ಯೆ ಪ್ರಕರಣ… ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿ ಪ್ರೊಟೆಸ್ಟ್.

Share

• ಧಾರವಾಡದಲ್ಲಿ ವಿದ್ಯಾರ್ಥಿ ಕುಟುಂಬಕ್ಕಾಗಿ ಬೃಹತ್ ಪ್ರತಿಭಟನೆ
• ಪೊಲೀಸ್ ಕಿರುಕುಳಕ್ಕೆ ಆದಿತ್ಯ ಆತ್ಮಹತ್ಯೆ ಆರೋಪ
• ವೇದಿಕೆಯಲ್ಲಿ ಮಗನನ್ನು ನೆನೆದು ಕಣ್ಣೀರಿಟ್ಟ ತಾಯಿ
• ನೊಂದ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಲು ಆಗ್ರಹ

ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಧಾರವಾಡ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಧಾರವಾಡದಲ್ಲಿ ಪ್ರತಿಭಟನೆ ಧರಣಿ ಕೈಗೊಂಡು ಆಕ್ರೋಶ ಹೊರಹಾಕಿದರು.

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧಾರವಾಡ ಸಮಾನ ಮನಸ್ಕರ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುತ್ತಿದ್ದು, ವಿದ್ಯಾರ್ಥಿ ಕಳೆದುಕೊಂಡ ಕುಟುಂಬಕ್ಕೆ ಆಗ್ರಹಿಸಿದರು. ಇನ್ನೂ ಇದೇ ವೇಳೆ ಆದಿತ್ಯ ತಾಯಿ ಪ್ರತಿಭಟನೆಯ ವೇದಿಕೆಯಲ್ಲಿ ಮಗನ ನೆನೆದು ಕಣ್ಣೀರು ಹಾಕಿದ್ದು ಎಲ್ಲರನ್ನು ಕೆಲಕಾಲ ದುಖಿಸುವಂತೆ ಮಾಡಿತ್ತು. ‌ಜತೆಗೆ ಆದಿತ್ಯ ವಿದ್ಯಾರ್ಥಿಯಾಗಿದ್ದ, ಆದರೆ ಪೊಲೀಸರು ಆತನನ್ನು ಗಾಂಜಾ ವ್ಯಸನದ ಆರೋಪ ಮೇಲೆ ಕರೆದುಕೊಂಡು ಹೋಗಿ ಒಂದು ರಾತ್ರಿ ಒಂದು ಹಗಲು ಇಟ್ಟುಕೊಂಡು, ಗಾಂಜಾ ತಪಾಸಣೆ ಮಾಡಿದ್ದಾರೆ. ಆದರೆ ರಿಪೋರ್ಟ್ ನೆಗೆಟಿವ್ ಬಂದಿದೆ. ಇದರ ನಂತರ ಮಧ್ಯವರ್ತಿಗಳನ್ನು ಬಳಸಿ ಗಾಂಜಾ ಕೇಸನಲ್ಲಿ ಹೆಸರು ಕೈ ಬೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ನೋಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಈಗ ಮಗನ ಕಳೆದುಕೊಂಡ ಕುಟುಂಬಕ್ಕೆ ದಿಕ್ಕು ಇಲ್ಲದಂತಾಗಿದೆ, ಇಲ್ಲಿಯ ವರೆಗೂ ಸರ್ಕಾರ ವಿದ್ಯಾರ್ಥಿ ಕುಡುಂಬಕ್ಕೆ ಒರಿಹಾರ ನೀಡದೇ ಇರುವುದು ದುರ್ದೈವದ ಸಂಗತಿ, ಈ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ‌ಇಲ್ಲವಾದಲ್ಲಿ ನಿರಂತರ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Tags:

error: Content is protected !!