Dharwad

ಧಾರವಾಡದಲ್ಲಿ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ 4ನೇ ದಿನಕ್ಕೆ ಕಾಲಿಟ್ಟ ಹೋರಾಟ…. ವಿರೋಧ ಪಕ್ಷ ಉಪನಾಯಕ ಅರವಿಂದ ಬೆಲ್ಲದವರು ಪಾಲಿಕೆಯಲ್ಲಿನ ಕಚೇರಿಗೆ ಬೀಗ.

Share

• ಧಾರವಾಡದಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟ ಹೋರಾಟ
• ಶಾಸಕ ಅರವಿಂದ ಬೆಲ್ಲದ್ ಕಚೇರಿಗೆ ಬೀಗ
• ಬಿಜೆಪಿ ನಾಯಕರ ವಿರುದ್ಧ ಹೋರಾಟಗಾರರ ಆಕ್ರೋಶ
• ಪ್ರತ್ಯೇಕ ಪಾಲಿಕೆ ಘೋಷಣೆಗೆ ತೀವ್ರ ಒತ್ತಾಯ

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ಇಂದು 4ನೇ ದಿನವು ಮುಂದುವರೆದಿದ್ದು, ಪಾಲಿಕೆಯ ಆವರಣಕ್ಕೆ ನುಗ್ಗಿದ ಹೋರಾಟಗಾರರು ಶಾಸಕ ಅರವಿಂದ ಬೆಲ್ಲದ ಅವರ ಪಾಲಿಕೆಯ ಆವರಣದಲ್ಲಿನ ಕಚೇರಿಗೆ ಬೀಗ ಹಾಕುವ ಮೂಲಕ ಆಕ್ರೋಶ ಹೊರಹಾಕಿದರು.

ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಧಾರವಾಡ ಕಚೇರಿ ಮುಂಭಾಗದಲ್ಲಿ ಪ್ರತ್ಯೇಕ ಪಾಲಿಕೆಗಾಗಿ ಆಗ್ರಹಿಸಿ, ಹೋರಾಟಗಾರರ ನಡೆಸುತ್ತಿರುವ ಧರಣಿ ಸತ್ಯಾಗ್ರಹವು ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ವೇದಿಕೆ ಯಲ್ಲಿ ಶಾಸಕ ಅರವಿಂದ ಬೆಲ್ಲದ ಸೇರಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ಮುಂದವರೆದು ಪಾಲಿಕೆಯ ಆವರಣದಲ್ಲಿರುವ ಶಾಸಕ ಅರವಿಂದ ಬೆಲ್ಲದವರ ಕಚೇರಿಗೆ ಬೀಗ ಹಾಕುವ ಮೂಲಕ ಆಕ್ರೋಶ ಅಸಮಧಾನ ವ್ಯಕ್ತಪಡಿಸಿದರು. ಪ್ರತ್ಯೇಕ ಪಾಲಿಕೆಯ ಕುರಿತು ರಾಜ್ಯ ಸರ್ಕಾರ ಸ್ಪಂದನೆ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದೆ, ಆದರೆ ಅರವಿಂದ ಬೆಲ್ಲದ ಸೇರಿ ಬಿಜೆಪಿ ನಾಯಕರು ಸಹಿ ಹಾಕದಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಪ್ರತ್ಯೇಕ ಪಾಲಿಕೆಯ ಧಾರವಾಡಕ್ಕೆ ಘೋಷಣೆಗೆ ವಿಳಂಬವಾಗುತ್ತಿದೆ. ಈ ಕೂಡಲೇ ಪ್ರತ್ಯೇಕ ಪಾಲಿಕೆಯ ವಿಚಾರದಲ್ಲಿ ರಾಜಕೀಯ ಬಿಟ್ಟು, ಪಾಲಿಕೆ ಘೋಷಣೆಗೆ ಸಹಕರಿಸಬೇಕು. ಇದರಿಂದ ಧಾರವಾಡ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ಬೆಲ್ಲದವರು ರಾಜಕೀಯ ಮಾಡುತ್ತಾ ಹೋದಲ್ಲಿ, ನಾವು ನಮ್ಮ ಹೋರಾಟ ಮತ್ತಷ್ಟು ಉಗ್ರಗೊಳ್ಳಿಸುವುದಾಗಿ ಎಚ್ಚರಿಕೆ ನೀಡಿದರು.

Tags:

error: Content is protected !!