ಪ್ರಧಾನಿ ನರೇಂದ್ರ ಮೋದಿ ಇಂಧನವನ್ನು ಮಿತವಾಗಿ ಬಳಸಿ ಮತ್ತು ಸಾರ್ವಜನಿಕ ಸಾರಿಗೆ ವಾಹನಗಳನ್ನು ಬಳಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಚಿಕ್ಕೋಡಿ ಡಿಡಿಪಿಐ ಸೀತಾರಾಮುಯವರು ಸೈಕಲ್ ಮೂಲಕ ತಮ್ಮ ಕಚೇರಿಗೆ ತೇರಳುತ್ತಿದ್ದಾರೆ.

ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ನಾಯಕರು ಮತ್ತು ಅಧಿಕಾರಿಗಳು ದ್ವಿಚಕ್ರ ವಾಹನಗಳು, ಮೆಟ್ರೋ ಮತ್ತು ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವುದನ್ನು ನಾವು ನೋಡುತ್ತಿದೇವೆ.ಆದರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಸೀತಾರಾಮು ಪ್ರತಿದಿನ ತಮ್ಮ ಕಚೇರಿಗೆ ಸೈಕಲ್‌ನಲ್ಲಿ ಬರುತ್ತಿದ್ದಾರೆ.

ಅವರು ಸರ್ಕಾರಿ ವಾಹನಗಳನ್ನು ಬಳಸುವ ಬದಲು ತಮ್ಮ ಕಚೇರಿಗಳಿಗೆ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ.ಸದ್ಯ ಜಾಗತಿಕ ಇಂಧನ ಕೊರತೆಯೊಂದಿಗೆ, ನಾವೆಲ್ಲರೂ ಇಂಧನವನ್ನು ಮಿತವಾಗಿ ಬಳಸಬೇಕಾಗಿದೆ.ಆದ್ದರಿಂದ ಡಿಡಿಪಿಐ ಸೀತಾರಾಮು ಯವರು ಕಚೇರಿಗೆ ಸೈಕಲ್‌ನಲ್ಲಿ ಬರಲು ನಿರ್ಧರಿಸಿದ್ದಾರೆ. ಇತರ ಸರ್ಕಾರಿ ಅಧಿಕಾರಿಗಳು ಸಹ ಬಸ್ ಸೇವೆಗಳು ಮತ್ತು ಸೈಕಲ್‌ಗಳನ್ನು ಬಳಸಬೇಕು ಎಂದು ಅವರು ಹೇಳಿದ್ದಾರೆ.
