Chikkodi

ಅಶ್ವಮೇಧ 2ಕೆ26 – ಒಂದು ದಿನದ ಟೆಕ್ನೋ-ಮ್ಯಾನೆಜಮೆಂಟ್ ಫೆಸ್ಟ್

Share

ಕೆ.ಎಲ್.ಇ. ಇಂಜಿನಿಯರಿಂಗ್ ಕಾಲೇಜಿನ ಎಮ್ ಬಿ ಎ ಮತ್ತು ಎಮ್ ಸಿ ಎ ವಿಭಾಗಗಳು ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಒಂದು ದಿನದ ಟೆಕ್ನೋ-ಮ್ಯಾನೆಜಮೆಂಟ್ ಸಮ್ಮೇಳನ ಅಶ್ವಮೇಧ 2ಕೆ26 ಅನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ –
ಇಂದಿನ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಜಗತ್ತಿನ ಬೇಡಿಕೆಯೇ ಬೇರೆ ಇದೆ. ಈಂಥಹ ಸಂದರ್ಭದಲ್ಲಿ ಕೇವಲ ಶೈಕ್ಷಣಿಕ ಸಾಧನೆ ಸಾಲದು, ಅದರ ಜೊತೆಗೆ ಕೌಶಲಗಳು ಬೇಕು. ಬೇರೆ – ಬೇರೆ ಕಾಲೇಜುಗಳು ಹಮ್ಮಿಕೊಳ್ಳುವ ಸ್ಪರ್ಧೆಗಳಲ್ಲಿ ಭಾಗವಹಿಸುವುದು ನಮ್ಮ ಕೌಶಲಗಳನ್ನ ಹೆಚ್ಚಿಸುತ್ತದೆ. ನಿಮ್ಮದೇಯಾದ ವೈಯಕ್ತಿಕ ವಿಶೇಷತೆ ಬೇಕು ಎಂದರು.

ಈ ಸಮ್ಮೇಳನದಲ್ಲಿ ಬೆಳಗಾವಿ, ಬಾಗಲಕೋಟ, ವಿಜಯಪುರ ಜಿಲ್ಲೆಗಳಿಂದ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು.
ಕ್ವಿಜ್ ಮಾಸ್ಟರ್ ಸ್ಪರ್ಧೆಯಲ್ಲಿ ದರ್ಶನ ಕವಳೆ ತಂಡ ಪ್ರಥಮ, ಸೃಷ್ಟಿ ಕೆಂಚಗೌಡಾ ತಂಡ ದ್ವಿತಿಯ ಸ್ಥಾನ ಗಳಿಸಿದ್ದಾರೆ. ಕೊಡೆಕ್ಸ್ ಸ್ಪರ್ಧೆಯಲ್ಲಿ ಮಲ್ಲಿಕಾರ್ಜುನ ಕಾಡಗೌಡ್ರ ತಂಡ ಪ್ರಥಮ, ಸಂತೋಷ ಜೊಡಟ್ಟಿ ತಂಡ ದ್ವೀತಿಯ ಸ್ಥಾನ ಗಳಿಸಿದ್ದಾರೆ. ಟ್ರೆಜರ್ ಹಂಟ ಸ್ಪರ್ಧೆಯಲ್ಲಿ ಲಕ್ಷ್ಮಿಕಾಂತ ತಳ್ಳಿ ತಂಡ ಪ್ರಥಮ, ಅನುಶಾ ಮಟ್ಟನ್ನವರ ದ್ವೀತಿಯ ಸ್ಥಾನ ಗಳಿಸಿದ್ದಾರೆ. ಸೋಲೊ ಡಾನ್ಸ್ ಸ್ಪರ್ಧೆಯಲ್ಲಿ ಸಮರ್ಥ ಗಾಣಿಗೇರ ಪ್ರಥಮ, ಸಾನಿಕಾ ಜಡಗೆ ದ್ವೀತಿಯ ಸ್ಥಾನ ಗಳಿಸಿದ್ದಾರೆ. ರಿಲ್ಸ್ ಮೆಕಿಂಗ್ ಸ್ಪರ್ಧೆಯಲ್ಲಿ ಸಂಜನಾ ಶೆಟ್ಟಿ ಪ್ರಥಮ, ಅಭೀಷೇಕ ಮಗದುಮ್ ದ್ವೀತಿಯ ಸ್ಥಾನ ಗಳಿಸಿದ್ದಾರೆ. ಗ್ರುಪ್ ಡಾನ್ಸ್ ಸ್ಪರ್ಧೆಯಲ್ಲಿ ದಿಯಾ ಪತೊಳೆ ತಂಡ ವಿಜೆತರಾಗಿದ್ದಾರೆ. ವಿಪನೊತ್ಸವ – ಮಾರ್ಕೆಟಿಂಗ್ ಮನಿಯಾ ಸ್ಪರ್ಧೆಯಲ್ಲಿ ವೈಶ್ಣವಿ ಶಿಂತ್ರೆ ತಂಡ ವಿಜೆತರಾಗಿದ್ದಾರೆ.

ಕು. ಕಿಶೋರಿ ಶೆಡಬಾಳೆ ಪ್ರಾರ್ಥಿಸಿದರು. ವಿಭಾಗ ಮುಖ್ಯಸ್ಥರಾದ ಡಾ. ಸುನೀಲ ಶಿಂಧೆ ಸ್ವಾಗತಿಸಿದರು. ಪ್ರೊ. ರುತುಜಾ ಉಪಾಧ್ಯೆ ಅಥಿತಿ ಪರಿಚಯಿಸಿದರು. ಪ್ರೊ. ಜ್ಯೋತಿ ಕಾಗಲಕರ ವಂದಿಸಿದರು. ಕು. ಶಿವಾನಿ ಕಿಲ್ಲೆದಾರ, ಪಲ್ಲವಿ ಖೋತ ನಿರೂಪಿಸಿದರು. ಪ್ರೊ. ಅನೀತಾ ಬಿರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಂಜಯ ಹನಗಂಡಿ, ಡಾ. ಸಚೀನ ಮೆಕ್ಕಳಕಿ, ಪ್ರೊ. ಆನಂದ ಮಿರ್ಜಿ, ಪ್ರೊ. ಐಶ್ವರ್ಯ ವಂಟಮುತ್ತೆ, ಪ್ರೊ. ಜ್ಯೋತಿ ಕಾಗಲಕರ, ಪ್ರೊ. ಅಭಿಲಾಶಾ ಬೊಲವಾಡೆ, ವಿದ್ಯಾರ್ಥಿ ಸಂಯೋಜಕರಾದ ಲಾವಣ್ಯ ಪಾಟೀಲ, ಸಿದ್ದಗೌಡಾ ಪಾಟೀಲ ಉಪಸ್ಥಿತರಿದ್ದರು.

Tags:

error: Content is protected !!