Chikkodi

ಗ್ರಾಮೀಣದಿಂದ ಅಂತರರಾಜ್ಯ ಮಟ್ಟಕ್ಕೆ ಬೆಳೆದ ಜೊಲ್ಲೆ ಗ್ರೂಪ್ : ಅಣ್ಣಾಸಾಹೇಬ ಜೊಲ್ಲೆ ಪ್ರಸಕ್ತ ವರ್ಷದಲ್ಲಿ ಜಿಯೋ ಪೇಟ್ರೋಲ್ ಪಂಪ- ಜೊಲ್ಲೆ ಧ್ವನಿ ಎಫ್ ಎಂ ಆರಂಭ

Share

ಚಿಕ್ಕೋಡಿ: ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ಸಂಸ್ಥೆಯು ಇಂದು ಅಂತರರಾಜ್ಯ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿದ್ದು, ಪ್ರಸಕ್ತ ವರ್ಷದಲ್ಲಿ 55 ನೂತನ ಶಾಖೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ-ನನದಿ ಸಿಬಿಎಸ್‌ಇ ಶಾಲೆಯ ಮೈದಾನದಲ್ಲಿ ನಡೆದ ಜೊಲ್ಲೆ ಗ್ರೂಪ್‌ನ ವಿವಿಧ ಸಂಸ್ಥೆಗಳ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸಹಕಾರ ಸಚಿವ Amit Shah ಅವರ ನೇತೃತ್ವದಲ್ಲಿ ಸಹಕಾರಿ ಕ್ಷೇತ್ರ ಬೆಳವಣಿಗೆ ಕಾಣುತ್ತಿದ್ದು, ಪ್ರಧಾನಿ Narendra Modi ಅವರು ರೈತ ಸಹಕಾರ ಸಂಘಗಳ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಹೇಳಿದರು.
ಕಳೆದ 36 ವರ್ಷಗಳಿಂದ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಬೀರೇಶ್ವರ ಸಹಕಾರಿ ಶಾಖೆಗಳನ್ನು ಆರಂಭಿಸಿ ಸಹಕಾರಿ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ಸಹಕಾರಿ ಸಂಸ್ಥೆಗಳಲ್ಲಿ ಲಭ್ಯವಾಗುತ್ತಿದ್ದು, ಇದರಿಂದ ಗ್ರಾಹಕರ ನೆಚ್ಚಿನ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.

 


ಹುಲಜಂತಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗುವುದು. ಜೊಲ್ಲೆ ಮನೆತನ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಟಿ ಲಿ. (ಬಹುರಾಜ್ಯ) 36ನೇ ಸರ್ವಸದಸ್ಯರ ಸಭೆ, ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘ ನಿ. ಯಕ್ಸಂಬಾದ 33ನೇ ವಾರ್ಷಿಕ ಸಭೆ, ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ 32ನೇ ವಾರ್ಷಿಕ ಸಭೆ, ಜೊಲ್ಲೆ ಎಜ್ಯುಕೇಶನ್ ಸೊಸಾಯಟಿಯ 31ನೇ ವಾರ್ಷಿಕ ಸಭೆ, ಯಕ್ಸಂಬಾ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ 19ನೇ ವಾರ್ಷಿಕ ಸಭೆ, ಲೋಕ ಕಲ್ಯಾಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ 15ನೇ ವಾರ್ಷಿಕ ಸಭೆ ಹಾಗೂ ಬಸವಜ್ಯೋತಿ ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಶನ್ ಕೋ-ಆಪ್ ಸೊಸಾಯಟಿಯ 6ನೇ ವಾರ್ಷಿಕ ಸಭೆಗಳು ಜರುಗಿದವು.
ಸಂಸ್ಥೆಯು ಪ್ರಸಕ್ತ ವರ್ಷದಲ್ಲಿ 4.45 ಲಕ್ಷ ಸದಸ್ಯರನ್ನು ಹೊಂದಿದ್ದು, 5000 ಕೋಟಿ ರೂ.ಕ್ಕೂ ಅಧಿಕ ಠೇವಣಿ ಸಂಗ್ರಹ, 3838 ಕೋಟಿ ರೂ. ಸಾಲ ವಿತರಣೆ ಹಾಗೂ 51.04 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ 233 ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅಣ್ಣಾಸಾಹೇಬ ಜೊಲ್ಲೆ ಮಾಹಿತಿ ನೀಡಿದರು.
ಗ್ರಾಹಕರ ವಿಶ್ವಾಸ, ಆಡಳಿತ ಮಂಡಳಿಯ ಪ್ರೋತ್ಸಾಹ ಹಾಗೂ ಸಿಬ್ಬಂದಿಗಳ ನಿರಂತರ ಪರಿಶ್ರಮದಿಂದ ಸಂಸ್ಥೆ ಇಷ್ಟೊಂದು ಬೆಳವಣಿಗೆ ಸಾಧಿಸಿದೆ ಎಂದರು.
ಶಾಸಕಿ Shashikala Jolle ಮಾತನಾಡಿ, ಜೊಲ್ಲೆ ಮನೆತನ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಬೀರೇಶ್ವರ ಸಂಸ್ಥೆಯ ಮೂಲಕ ಇನ್ನಷ್ಟು ಸಮಾಜಮುಖಿ ಕಾರ್ಯ ಮಾಡಲು ಪ್ರೇರಣೆ ದೊರೆತಿದೆ ಎಂದು ಹೇಳಿದರು. ಸಿಬ್ಬಂದಿಗಳ ಸಹಕಾರ ಮತ್ತು ಸದಸ್ಯರ ಪ್ರೋತ್ಸಾಹದಿಂದ ಸಂಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬೀರೇಶ್ವರ ಸಹಕಾರಿ ಸಂಸ್ಥೆಯ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಆನಂದ ಪಾಟೀಲ, ಜ್ಯೋತಿ ಸಂಸ್ಥೆಯ ಅಧ್ಯಕ್ಷ ಬಾಬುರಾವ ಮಾಳಿ, ಉಪಾಧ್ಯಕ್ಷ ವಿಶ್ವನಾಥ ಪೇಟಕರ, ಯಕ್ಸಂಬಾ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಗಲ ಜೊಲ್ಲೆ, ಉಪಾಧ್ಯಕ್ಷ ಆರತಿ ಪೋತದಾರ, ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಣ ಕಬಾಡೆ, ಉಪಾಧ್ಯಕ್ಷ ಸದಾಶಿವ ಕೋಕಣೆ, ಮಹೇಶ ಭಾತೆ, ಈಶ್ವರ ಕತ್ತಿ, ರಾಜೇಂದ್ರ ಪಾಟೀಲ, ಚಂದ್ರಶೇಖರ ಕವಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ಬಿ.ಎ. ಗುರವ, ಉಪ ಪ್ರಧಾನ ವ್ಯವಸ್ಥಾಪಕರಾದ ಎಂ.ಕೆ. ಮಂಗಾವತೆ, ಆರ್.ಜಿ. ಕುಂಬಾರ, ಎಸ್.ಕೆ. ಮಾನೆ, ಶಿವು ಡಬ್ಬನ್ನವರ, ಶೇಖರ ಪಾಟೀಲ, ಸಂತೋಷ ಪಾಟೀಲ ಹಾಗೂ ಎಂ.ಎಂ. ಪಾಟೀಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು.
ಕೋಟ್
“ಪ್ರಸಕ್ತ ವರ್ಷದಿಂದ ಜೊಲ್ಲೆ ಗ್ರೂಪ್ ವತಿಯಿಂದ ಜಿಯೋ ಪೆಟ್ರೋಲ್ ಪಂಪ್ ಹಾಗೂ ‘ಜೊಲ್ಲೆ ಧ್ವನಿ’ ಎಂಬ ಎಫ್‌ಎಂ ಆರಂಭಿಸಲಾಗುತ್ತದೆ.”
— ಬಸವಪ್ರಸಾದ ಜೊಲ್ಲೆ, ಉಪಾಧ್ಯಕ್ಷ, ಜೊಲ್ಲೆ ಗ್ರೂಪ್

Tags:

error: Content is protected !!