Chikkodi

ಚಿಕ್ಕೋಡಿ-ಕರೋಶಿ ರಸ್ತೆಯಲ್ಲಿ ನೆಲಕ್ಕುರುಳಿದ ಬೃಹತ್ ಮರ: ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ಅನಾಹುತ

Share

ಬಿರುಗಾಳಿಗೆ ಸಿಲುಕಿ ರಸ್ತೆಗಡ್ಡಲಾದ ಬೃಹತ್ ಮರ

ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಪ್ರಾಣಾಪಾಯ

ಚಿಕ್ಕೋಡಿ-ಕರೋಶಿ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತ

ರಸ್ತೆ ತೆರವುಗೊಳಿಸಿದ ಪೊಲೀಸರು ಮತ್ತು ಸ್ಥಳೀಯರು

ಚಿಕ್ಕೋಡಿ ಭಾಗದಲ್ಲಿ ಬೀಸಿದ ಭೀಕರ ಬಿರುಗಾಳಿಗೆ ರಸ್ತೆಯಲ್ಲಿದ್ದ ಹಳೆಯ ಮರವೊಂದು ಧರೆಗುರುಳಿದ್ದು, ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಅದೃಷ್ಟವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದ್ದು, ಪೊಲೀಸರು ಹಾಗೂ ಸ್ಥಳೀಯರು ಸಕಾಲಕ್ಕೆ ಸ್ಪಂದಿಸಿ ರಸ್ತೆ ತೆರವುಗೊಳಿಸಿದ್ದಾರೆ.

ಬಿರುಗಾಳಿ ಸಹಿತ ಮಳೆಗೆ ಚಿಕ್ಕೋಡಿ-ಕರೋಶಿ ರಸ್ತೆಯ ಮೇಲೆ ಶನಿವಾರ ಸಂಜೆ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದಿದೆ. ಈ ಘಟನೆಯಿಂದಾಗಿ ವಾಹನಗಳ ಸಂಚಾರಕ್ಕೆ ಸಂಪೂರ್ಣ ಅಡಚಣೆ ಉಂಟಾಗಿತ್ತು. ಮರ ಬೀಳುವ ಕೇವಲ ಕೆಲವೇ ಕ್ಷಣಗಳ ಮೊದಲು ಕೆಲವು ವಾಹನಗಳು ಆ ಮಾರ್ಗದಲ್ಲಿ ಸಂಚರಿಸಿದ್ದವು, ಆದರೆ ಮರ ಬೀಳುವ ಸಂದರ್ಭದಲ್ಲಿ ಯಾವುದೇ ವಾಹನಗಳು ಇಲ್ಲದ ಕಾರಣ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನೆ ಸಂಭವಿಸಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಚಿಕ್ಕೋಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸಾರ್ವಜನಿಕರ ಸಹಕಾರದೊಂದಿಗೆ ಮರವನ್ನು ಕತ್ತರಿಸಿ ರಸ್ತೆಯನ್ನು ಸಂಚಾರ ಮುಕ್ತಗೊಳಿಸಿದರು. ಸುಮಾರು ಒಂದೆರಡು ಗಂಟೆಗಳ ಕಾಲ ವಾಹನ ಸವಾರರು ಪರದಾಡುವಂತಾಯಿತು. ಸದ್ಯ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಸಂಚಾರ ಸುಗಮವಾಗಿದೆ.

Tags:

error: Content is protected !!