• ಖಾಲಿ ಹುದ್ದೆಗಳ ಭರ್ತಿಗೆ ಆಕ್ಸಾ ಆಗ್ರಹ
• ಧರಣಿ ನಿರತ ಕಾಂತಕುಮಾರ್ ಪೊಲೀಸ್ ವಶ
• ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಚಕಮಕಿ
• ನೇಮಕಾತಿಗಾಗಿ ಧಾರವಾಡದಲ್ಲಿ ಮುಂದುವರಿದ ಹೋರಾಟ

ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಆಗ್ರಹಿಸಿ, ಆಕ್ಸಾ (AKKSA) ಸಂಘಟನೆಯ ಮುಖಂಡ ಕಾಂತಕುಮಾರ್ ಅವರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರಿರುವ ಗಾಂಧಿ ಪ್ರತಿಮೆ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದರು.
ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು, “ನಿಮಗೆ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಕೇವಲ 100 ಜನರಿಗೆ ಮಾತ್ರ ಪ್ರತಿಭಟನೆ ನಡೆಸಲು ಹೈಕೋರ್ಟ್ ಅವಕಾಶ ನೀಡಿದೆ. ಆದರೆ, ನೀವು ಇಲ್ಲಿ ಪ್ರತಿಭಟನೆ ನಡೆಸುತ್ತಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಕೂಡಲೇ ಪ್ರತಿಭಟನೆ ಕೈಬಿಡಿ” ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಂತಕುಮಾರ್ ಅವರು, “ನಾನು ಪ್ರತಿಭಟನೆ ಕೈಬಿಡುವುದಿಲ್ಲ, ಬೇಕಿದ್ದರೆ ನನ್ನನ್ನು ಬಂಧಿಸಿ” ಎಂದು ಪಟ್ಟು ಹಿಡಿದರು. ಇದರಿಂದ ಪೊಲೀಸರು ಮತ್ತು ಕಾಂತಕುಮಾರ್ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.
ಕೊನೆಗೆ ಪೊಲೀಸರು ಬಲವಂತವಾಗಿ ಕಾಂತಕುಮಾರ್ ಅವರನ್ನು ಬಂಧಿಸಿ ಕರೆದೊಯ್ದರು. ನಾಲ್ಕೈದು ಜನ ಪೊಲೀಸರು ಸೇರಿ ಅವರನ್ನು ಒತ್ತಾಯಪೂರ್ವಕವಾಗಿ ಕರೆದೊಯ್ಯುವ ವೇಳೆ ತಳ್ಳಾಟ-ನೂಕಾಟ ನಡೆಯಿತು. “ನಾನು ನಮ್ಮ ಹಕ್ಕನ್ನು ಕೇಳುತ್ತಿದ್ದೇನೆ. ನಮ್ಮ ಸಂವಿಧಾನಾತ್ಮಕ ಹಕ್ಕನ್ನು ಕಸಿದುಕೊಳ್ಳಬೇಡಿ. ಮೊದಲು ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸರ್ಕಾರಕ್ಕೆ ತಿಳಿಸಿ” ಎಂದು ಕಾಂತಕುಮಾರ್ ಪೊಲೀಸರ ಮುಂದೆ ತಮ್ಮ ಬೇಡಿಕೆಗಳನ್ನು ಇಟ್ಟರು. ಆದರೆ ಪೊಲೀಸರು ಯಾವುದಕ್ಕೂ ಕಿವಿಗೊಡದೆ, ಅವರನ್ನು ವಾಹನದಲ್ಲಿ ಹತ್ತಿಸಿ ಕರೆದೊಯ್ದರು.
Visuals flow….. Byte: ಕಾಂತಕುಮಾರ್, ಆಕ್ಸಾ ಮುಖಂಡ.

